ಗ್ಲೋಬಲ್ ಶಾಲೆ ಸರ್ಕಾರವೇ ವಹಿಕೊಳ್ಳಲು ಮನವಿ

ದಾವಣಗೆರೆ.ಜೂ.20; ನಗರದಲ್ಲಿ ಐಎಂಎ ಕಂಪನಿಯಡಿ ನಡೆಯುತ್ತಿರುವ ಗ್ಲೋಬಲ್ ಶಾಲೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ತೊಂದರೆಯಾಗದಂತೆ ಮುಂದುವರೆಸಬೇಕೆಂದು ಒತ್ತಾಯಿಸಿ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಡಿಡಿಪಿಐ ಕಛೇರಿಯ ವ್ಯವಸ್ಥಾಪಕರಾದ ಶ್ರೀನಿವಾಸನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಐಎಂಎ ಕಂಪನಿಯಡಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಶಾಲೆಯನ್ನು ಮುಂದುವರೆಸಿದರೆ ವಿದ್ಯಾರ್ಥಿಗಳು ಅತಂತ್ರರಾಗುವುದು ತಪ್ಪುತ್ತದೆ. ಗ್ಲೊಬಲ್ ಶಾಲೆಯನ್ನು ಬೇರೆ ಯಾವುದಾದರೂ ಸಂಸ್ಥೆ, ಖಾಸಗಿಯವರು ಮುಂದುವರೆಸಿಕೊಂಡು ಹೋಗಲು ಮುಂದೆ ಬಂದರೆ ಅಥವಾ ಟ್ರಸ್ಟ್ ನವರು ಬಂದರೆ ಅವರಿಗೆ ವಹಿಸಿಕೊಡಬಾರದು ಹಾಗೂ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ಅಯಾಜ್ ಹುಸೇನ್, ಅನ್ಸಾರ್ ಹುಸೇನ್, ಎಂ.ಹೆಚ್.ಸತ್ತಾರ್, ಓಂಕಾರಪ್ಪ ಇದ್ದರು.

Leave a Comment