ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆ್ಯಶ್ಲೇ ನಿಧನ

ಬ್ರಿಸ್ಬೇನ್, ಮೇ 22-ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು 1958ರಲ್ಲಿ ಯುಎಸ್ ಚಾಂಪಿಯನ್ ಷಿಪ್ ಸೇರಿದಂತೆ ಒಟ್ಟು ನಾಲ್ಕು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಕಿರೀಟ ಜಯಿಸಿದ್ದ ಆ್ಯಶ್ಲೇ ಕೂಪರ್ (83) ನಿಧನರಾಗಿದ್ದಾರೆ .
ದೀರ್ಘ ಕಾಲದ ಅನಾರೋಗ್ಯದ ಕಾರಣ ಮಾಜಿ ನಂ.1 ಹಾಗೂ ದೀರ್ಘಕಾಲದ ಆಡಳಿತಗಾರ ಆ್ಯಶ್ಲೇ ಕೂಪರ್ ನಿಧನರಾಗಿದ್ದಾರೆ ಎಂದು ಟೆನಿಸ್ ಆಸ್ಟ್ರೇಲಿಯಾ ಶುಕ್ರವಾರ ತಿಳಿಸಿದೆ.
ಕೂಪರ್ ನೇತೃತ್ವದ ಆಸ್ಟ್ರೇಲಿಯಾ ಡೇವಿಸ್ ಕಪ್ ತಂಡ, 1957ರಲ್ಲಿ ಅಮೆರಿಕ ವಿರುದ್ಧ ಗೆದ್ದು ಪ್ರಶಸ್ತಿ ಉಳಿಸಿಕೊಂಡಿತ್ತು. ಆದರೆ ಮರು ವರ್ಷ ಆಸ್ಟ್ರೇಲಿಯಾ ತಂಡ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಕೂಪರ್ ತೀವ್ರ ಬೇಸರಗೊಂಡಿದ್ದರು ಎಂದು ಟೆನಿಸ್ ಆಸ್ಟ್ರೇಲಿಯಾ ಹೇಳಿದೆ.

Leave a Comment