ಗ್ರಾ.ಪಂ.ಚುನಾವಣೆ ಮುಂದೂಡಿಕೆಗೆ ಹವಾಲ್ದಾರ ಖಂಡನೆ

ಹುಬ್ಬಳ್ಳಿ,ಮೇ 26- ರಾಜ್ಯದಲ್ಲಿ ಮೇ ಅಥವಾ ಜೂನದಲ್ಲಿ ನಡೆಯಬೇಕಿದ್ದ ಸುಮಾರು 6024 ಗ್ರಾಮ ಪಂಚಾಯಿತಿಗಳ ಚುನಾವಣೆಗಳು ಕೋವಿಡ್-19 ಕಾರಣಕ್ಕೆ ಮುಂದೂಡಿ ಆಡಳಿತ ಸಮಿತಿ ರಚೆನೆಗೆ ರಾಜ್ಯ ಸರಕಾರ ಆದೇಶ ನೀಡಿದ್ದು ಸಂವಿಧಾನ ಬಾಹಿರ. ಪಂಚಾಯಿತಿ ರಾಜ್ಯ ಕಾಯ್ದೆ 1993 ರ ಅಡಿ ಚುನಾವಣೆ ಮುಂದೂಡುವ ಯಾವುದೇ ಪ್ರಾಧ್ಯಾನತೆ ಇಲ್ಲ. ಆದರೆ ಸರಕಾರ ಚನಾವಣೆ ಮುಂದೂಡಲು ಹುನ್ನಾರು ನಡೆಸಿದ್ದು, ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತುಕೊಂಡಿದ್ದು ಖಂಡನೀಯ ಎಂದು  ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಫಿರೋಜಖಾನ್ ಹವಾಲ್ದಾರ ಹೇಳಿದ್ದಾರೆ.
ಕೋವಿಡ್-19ದ ಲಾಕ್‍ಡೌನ್ ಸಡಿಲಗೊಳಿಸಿದ್ದು ಇದೆ.  ಇದರಿಂದಾಗಿ ಚುನಾವಣೆ ಮುಂದೂಡುವ ಅವಶ್ಯಕತೆ ಇಲ್ಲ. ಸಂವಿಧಾನ ಅನುಚ್ಛೇದ 243ಇ(3) ರ ಅನ್ವಯ ಮತ್ತು ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ಯ ಕಾಯ್ದೆ ಅಡಿಯಲ್ಲಿ ಅವಧಿ ಮುಗಿಯುವ ಮುಂಚೆ ಚುನಾವಣೆ ನಡೆಸುವ ಪ್ರಾಧ್ಯನತೆ ಇದೆ.
ಆದ್ದರಿಂದ ಚುನಾವಣಾ ಆಯೋಗ ಶೀಘ್ರವಾಗಿ ಚುನಾವಣೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಲೋಕ ತಾಂತ್ರಿಕ ಜನತಾದಳ ರಾಜ್ಯ ಯುವ ಘಟಕ ಮನವಿ ಮಾಡಿಕೊಂಡಿದ್ದು, ಈ ಕುರಿತು ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಫಿರೋಜಖಾನ್ ಹವಾಲ್ದಾರ, ಮೈನುದ್ದೀನ್‍ಖಾನ್, ಮೆಹಬೂಬ, ರಿಯಾಜ್ ಮತ್ತು ಬಸವರಾಜ ಇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a Comment