ಗ್ರಾ.ಪಂ ಚುನಾವಣೆ ದಿನಾಂಕ ರದ್ದುಗೊಳಿಸಲು ಮನವಿ

ಹರಪನಹಳ್ಳಿ.ಮಾ.14; ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ ಮಾ.16ರಂದು ಇದ್ದು ಈ ಬಗ್ಗೆ ಸದಸ್ಯರಿಗೆ ನೋಟಿಸ್ ನೀಡಿರುವುದಿಲ್ಲ ಕಾರಣ ಚುನಾವಣೆ ದಿನಾಂಕ ರದ್ದುಗೊಳಿಸಿ ಮರು ದಿನಾಂಕ ಪ್ರಕಟಿಸಿ ಎಂದು ಗ್ರಾಪಂ ಸದಸ್ಯರು ಉಪವಿಭಾಗಾಧಿಕಾರಿ ಜಿ.ನಜ್ಮಾ ಇವರಿಗೆ ಮನವಿ ಸಲ್ಲಿಸಿದರು. ನೂತನ ಸದಸ್ಯರಾದ ನಾವುಗಳು ಮಾ.16ರಂದು ಗ್ರಾಪಂನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತದೆ ಎಂಬ ಮಾಹಿತಿ ತಿಳಿದಿದ್ದು ಸರಿಯಷ್ಟೆ, ಆದರೆ ತಮ್ಮ ಕಛೇರಿಯಿಂದಾಗಲಿ, ಚುನಾವಣಾಧಿಕಾರಿಗಳಿಂದ ನಮ್ಮಗಳಿಗೆ ಇದುವರೆಗೂ ಯಾವುದೇ ತರಹವಾದ ನೋಟಿಸ್ಸನ್ನು ನಮಗೆ ನೀಡಿರುವುದಿಲ್ಲ. ಆರ್‍ಡಿಪಿಆರ್ ನಿಯಮದ ಅಡಿ ಸದಸ್ಯರಿಗೆ ಏಳು ದಿನಗಳ ಮುಂಚಿತವಾಗಿ ನೋಟಿಸ್ಸ ನೀಡುವುದು ನಿಯಮವಿದ್ದು ಇದನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಹಿಂದಿನ ದಿನಾಂಕ ನಮೂದಿಸಿದ್ದು ಒತ್ತಡಕ್ಕೆ ಮಣಿದು ಗೊಂದಲ ಸೃಷ್ಠಿಸಿರುತ್ತೀರಿ ಆದ್ದ ಕಾರಣ ತಾವುಗಳು ಚುನಾವಣಾ ದಿನಾಂಕವನ್ನು ತಕ್ಷಣವೇ ರದ್ದುಪಡಿಸಿ ಹೊಸದಾಗಿ ದಿನಾಂಕ ಪ್ರಕಟಿಸಿ 7 ದಿನಗಳ ಮುಂಚಿತವಾಗಿ ಎಲ್ಲಾ ಸದಸ್ಯರಿಗೂ ನೋಟಿಸ್ ನೀಡಬೇಕೆಂದು ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಾರಕನಾಳು ಗ್ರಾಪಂ ಸದಸ್ಯರಾದ ಹಿರಿಬಾಯಿ, ಸುಶೀಲಬಾಯಿ, ಕೆ.ಭಾಗ್ಯ, ಸಾವಿತ್ರಿ, ಗಿರಿಜಮ್ಮ, ಸೋನಿಬಾಯಿ, ವಿ.ನಾಗರಾಜ, ಸಿ.ಶಶಿಕಲಾ, ಬಾರಹಿಬಾಯಿ, ಎಚ್.ಚಂದ್ರಪ್ಪ, ಹಾಲೇಶ್‍ನಾಯ್ಕ, ಕೆ.ಅಶೋಕ, ಕೊಟ್ರೇಶ್ ಮತ್ತಿತರರು ಇದ್ದರು.

Leave a Comment