ಗ್ರಾ.ಪಂ ಉಪಾಧ್ಯಕ್ಷೆಯಾಗಿ ಶಂಭಕ್ಕ ಅವಿರೋಧ ಆಯ್ಕೆ

ಹರಪನಹಳ್ಳಿ.ಮೇ.15; ತಾಲೂಕಿನ ಅರಸೀಕೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿ ಶಂಭಕ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿದ್ದ ಮಾಳ್ಗೆರ ರೇಣುಕಾಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಯಸಿ ಶಂಭಕ್ಕ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ಸಕ್ಕರೆಗೌಡ ತಿಳಿಸಿದರು.

ಅವಿರೋಧವಾಗಿ ಆಯ್ಕೆಯಾದ ಶಂಭಕ್ಕ ಅವರನ್ನು ಅಧ್ಯಕ್ಷೆ ವಿಜಯಲಕ್ಷ್ಮೀ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ವೈ.ಡಿ ಅಣ್ಣಪ್ಪ, ಪ್ರಶಾಂತ ಪಾಟೀಲ್, ಟಿ.ಪರಸಪ್ಪ, ಬಸವರಾಜಪ್ಪ, ಸಲೀಂ, ಅಜೀಮ್, ಷಣ್ಮುಖಪ್ಪ, ಎ. ಬಿ.ಮಂಜುನಾಥಗೌಡ, ಮಧು, ಗಿರೀಶ್, ಯೋಗೇಶ್, ಎನ್.ಸಿದ್ದಪ್ಪ, ಚಂದ್ರಪ್ಪ, ಸುನೀತಾ, ಪಿಡಿಒ ಮಹಮ್ಮದ್ ಹುಸೇನ್, ಪೂಜಾರ ಮರಿಯಪ್ಪ ಮತ್ತಿತರರು ಇದ್ದರು.

ಪೋಟೋ: 14-ಎಚ್‍ಆರ್‍ಪಿ-2: ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾ.ಪಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಶಂಭಕ್ಕ ಅವರನ್ನು ಸದಸ್ಯರು ಅಭಿನಂದಿಸಿದರು.

Leave a Comment