ಗ್ರಾಹಕರ ದೂರುಗಳಿಗೆ ನಿಗದಿತ ಅವಧಿಯಲ್ಲಿ ಸ್ಪಂದಿಸಲು ಆರ್.ಬಿ.ಐ. ಸೂಚನೆ

ಬ್ಯಾಂಕ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿ. ಇನ್ನು ಮೇಲೆ ನಿಮ್ಮ ಯಾವುದೇ ದೂರುಗಳಿದ್ದರೂ ಬ್ಯಾಂಕ್ ಗಳು ಶೀಘ್ರವಾಗಿ ಸಮಸ್ಯೆಯನ್ನು ಪರಿಹರಿಸಿಕೊಡಬೇಕು.

ಎಟಿಎಂನಲ್ಲಿ ಹಣದ ಸಮಸ್ಯೆಯಾಗಿರಬಹುದು, ಇಲ್ಲವೇ ಇನ್ಯಾವುದೇ ವ್ಯವಹಾರಕ್ಕೆ ಸಂಬಂಧಪಟ್ಟ ದೂರುಗಳು ಇರಬಹುದು. ಅದನ್ನು ನಿಗದಿತ ವೇಳೆಯಲ್ಲಿ ಪರಿಹರಿಸಬೇಕೆಂದು ಆರ್.ಬಿ.ಐ. ಶುಕ್ರವಾರ ಸೂಚನೆ ನೀಡಿದೆ.

ಗ್ರಾಹಕರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಎಟಿಎಂನಲ್ಲಿ ಹಣ ಬಾರದಿದ್ದರೂ ಖಾತೆಯಲ್ಲಿ ಕಡಿತಗೊಂಡಿರುತ್ತದೆ. ಇದು ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ದೂರುಗಳು ಸಾಕಷ್ಟು ಬಂದಿವೆ. ಇಂತಹ ಸಂದರ್ಭದಲ್ಲಿ ಗ್ರಾಹಕರ ದೂರುಗಳಿಗೆ ಕಾಯದೆ ಸುಮೋಟೋ ಪ್ರಕರಣಗಳನ್ನು ಬ್ಯಾಂಕ್ ಗಳು ದಾಖಲಿಸಿಕೊಂಡು ಶೀಘ್ರವಾಗಿ ಪರಿಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಆರ್.ಬಿ.ಐ. ನೀಡಿದೆ.

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಗ್ರಾಹಕರ ಅನುಕೂಲಕ್ಕಾಗಿ ಟಿಎಟಿ ಎಂಬ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಅಂದರೆ ಟರ್ನ್ ಅರೌಂಡ್ ಟೈಮ್ (ನಿಗದಿತ ಸಮಯ) ಒಳಗೆ ಬ್ಯಾಂಕ್ ಗಳು ದೂರುಗಳನ್ನು ಬಗೆಹರಿಸಬೇಕು. ಇಲ್ಲಿ ದಾಖಲಾಗುವ ದೂರುಗಳು ಎಷ್ಟು ಸಮಯದಲ್ಲಿ ಪರಿಹಾರಗೊಳ್ಳುತ್ತವೆ ಎಂಬುದನ್ನು ಗಮನಿಸುವ ಆರ್.ಬಿ.ಐ., ವಿಳಂಬವಾದರೆ ಆ ದಿನಗಳಿಗೆ ತಕ್ಕಂತೆ ಬ್ಯಾಂಕುಗಳಿಗೆ ದಂಡವನ್ನು ವಿಧಿಸುತ್ತದೆ.

Leave a Comment