ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಜಗಳೂರು.ಜು.12; ಜಮೀನಿನ ಖಾತೆ ಬದಲಾವಣೆ ಮಾಡಿ ಕೊಡಲು ಲಂಚ ಪಡೆಯುವ ಸಂರ್ದಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ನಿವಾಸಿ ಶೈಲಪ್ರಕಾಶ್ ಅವರಿಗೆ ಸೇರಿದ 3 ಎಕರೆ 33 ಗುಂಟೆ ಜಮೀನು ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದ ಸ.ನಂ. 34/1 ರಲ್ಲಿದ್ದು ಈ ಜಮೀನಿನ ಖಾತೆ ಬದಲಾವಣೆ ಮಾಡಲು ಭರಮಸಮುದ್ರ ಫಿರ್ಕಾದ ಗ್ರಾಮ ಲೆಕ್ಕಾಧಿಕಾರಿ ವಿಷ್ಣು ಹಾಗೂ ಗ್ರಾಮ ಸಹಾಯಕ ಹನುಮಂತಪ್ಪ ಎಂಬುವವರು 4 ಸಾವಿರ ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ. ಅಂಬೇಡ್ಕರ್ ವೃತ್ದಲ್ಲಿರುವ ಶೆಟ್ಟರ ಬಿಲ್ಡಿಂಗ್‍ನಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಯ ಕೊಠಡಿಯಲ್ಲಿ ಸದರಿ ಲಂಚದ 4 ಸಾವಿರ ಹಣದಲ್ಲಿ ಇಂದು 3 ಸಾವಿರ ಹಣವನ್ನು ಸ್ವೀಕರಿಸುವಾಗ ಎಸಿಬಿ ಡಿವೈಎಸ್‍ಪಿ ಪರಮೇಶ್ವರ್ ಹಾಗೂ ತಂಡ ದಾಳಿ ನಡೆಸಿ ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.

Leave a Comment