ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಚುನಾವಣಾ ಆಯೋಗ ಸಮ್ಮತಿ

ಬೆಂಗಳೂರು ಮೇ 29: ಕೊರೊನಾ ಹಿನ್ನಲೆಯಲ್ಲಿ ‘ಅಸಾಧಾರಣ ಪರಿಸ್ಥಿತಿ’ ಎಂದು ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದೆ.

ರಾಜ್ಯದ 6,025 ಗ್ರಾಮ ಪಂಚಾಯಿತಿಗಳ ಪೈಕಿ ಜೂನ್‌ನಿಂದ ಆಗಸ್ಟ್ ಮಧ್ಯೆ ಸುಮಾರು 5,800 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯ ಗೊಳ್ಳುತ್ತಿದೆ. ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ನೀಡಿದ ವರದಿ ಪರಿಗಣಿಸಿ ಈ‌ ನಿರ್ಧಾರ ತೆಗೆದುಕೊಂಡಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಕೋವಿಡ್‌ ನಿಯಂತ್ರಣದಲ್ಲಿ ಜಿಲ್ಲಾಡಳಿತ ತೊಡಗಿದ್ದು, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆ ಒದಗಿಸಲು ತೊಂದರೆಯಾಗಬಹುದು.
ಚುನಾವಣೆ ನಡೆಸಿದರೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಕಿಷನ್‌ ಸಿಂಗ್‌ ತೋಮರ್‌ ಮತ್ತು ಅಹಮದಾಬಾದ್‌ನ ಸಿಟಿ ಮುನಿಸಿಪಲ್‌ ಕಾರ್ಪೊರೇಷನ್‌ ಪ್ರಕರಣದಲ್ಲಿ ನೈಸರ್ಗಿಕ ವಿಪತ್ತಿನಿಂದ ಚುನಾವಣೆ ನಡೆಸುವುದು ಪ್ರಾಧಿಕಾರಗಳಿಗೆ ಕಷ್ಟವಾದರೆ ಅಂಥ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆಂದೂ ಆಯೋಗ ಸಮರ್ಥನೆ ನೀಡಿದೆ.

Share

Leave a Comment