ಗ್ರಾಮಾಂತರ ಕ್ರೀಡಾ ಪ್ರತಿಭೆಗಳು ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿಂಚಲಿ

ಹೊನ್ನಾಳಿ.ಸೆ.9; ವಿದ್ಯಾರ್ಥಿ ಜೀವನದಂತಹ ಮಹತ್ವದ ದಿನಗಳು ಹುಟ್ಟಿನಿಂದ ಸಿಗುವುದು ಒಂದೇ ಬಾರಿ ಇದರ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಶಿಕ್ಷಕರು ಪೋಷಕರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನಿಗಾವಹಿಸುವುದು ಅಗತ್ಯವಾಗಿದೆಯೆಂದು ಮಾಜಿ ಸಚಿವ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿ.ಪಂ ದಾವಣಗೆರೆ ತಾ.ಪಂ ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಹೊನ್ನಾಳಿ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಮೈದಾನದಲ್ಲಿ ಗುಂಡು ಎಸೆಯುವುದರ ಮೂಲಕಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯೆ ಎಂಬುದು ಯಾರ ಸ್ವತ್ತು ಅಲ್ಲ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಲ್ಲಿ ವಿದ್ಯಾರ್ಥಿ ಜೀವನ ವಿಕಾಸಗೊಳ್ಳಲು ಸಾಧ್ಯ ಕೇವಲ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಮಾತ್ರಕ್ಕೆ ಏನನ್ನೂ ಸಾಧಿಸಲಾಗುವುದಿಲ್ಲ. ತಾನೂ ಕಲಿತ ವಿದೆÀ್ಯಯನ್ನು ಇನ್ನೊಬ್ಬರಿಗೆ ಮಾರ್ಗದರ್ಶಿಯಾಗಿ ಬೋಧಿಸುವಂತಾಗಬೇಕು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಕ್ಷೇತ್ರ ಪ್ರಗತಿ ಸಾಧಿಸಿದ್ದರೂ ಗ್ರಾಮಾಂತರ ಮಟ್ಟದ ಉತ್ತಮ ಕ್ರೀಡಾಪಟುಗಳಿಗೆ ಈವರೆಗೂ ಯಾವಮಟ್ಟದಲ್ಲೂ ಗುರುತಿಸುವುದು ವಿಶಾದ ಎನಿಸುತದೆ. ಕ್ರೀಡಾ ಕ್ಷೇತ್ರದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೂ ಉತ್ತಮ ತರಬೇತಿದಾರರ ಕೊರತೆ ಇದೆ, ದೈಹಿಕ ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಆದಷ್ಟು ನಿಗಾವಹಿಸಿ ಉತ್ತಮ ತರಬೇತಿ ನೀಡಲು ಶ್ರಮ ಪಡಬೇಕು ತಾಲ್ಲೂಕು ಜಿಲ್ಲಾ ಮಟ್ಟದ ನಮ್ಮ ಪ್ರತಿಬೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಲಿ ಎಂಬುದು ನಮ್ಮ ಆಶಯವೆಂದರು. ವಿದ್ಯಾರ್ಥಿಗಳು ಸಾಮಥ್ರ್ಯ ಮತ್ತು ಸಾಮರಸ್ಯ ಮನೋಭಾವ ಬೆಳಸಿಕೊಳ್ಳಲು ಇಂತಹ ಕ್ರೀಡಾಕೂಟಗಳು ಅತ್ಯಾವಶ್ಯಕವೆನಿಸಿವೆ. ಯಾವುದೇ ಚಟುವಟಿಕೆಗಳಿಗೆ ಪೂರಕವಾಗಿ ಶಿಕ್ಷಕರು ಶಾಲೆಗಳ ಪರಿಸರವನ್ನು ಮೊದಲು ಕಾಪಾಡಿಕೊಳ್ಳಬೇಕು. ಯಾವ ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳು ಆಸಕ್ತವಾಗಿ ಕಲಿಯುವಂತಿರಬೇಕು ಶಿಕ್ಷಕರು ತಾರತಮ್ಯ ಎಣ ಸದೇ ಮಕ್ಕಳನ್ನು ವಂಚಿತರನ್ನಾಗಿ ಮಾಡಬಾರದು. ಅವರವರ ಕಲಿಕಾಸಕ್ತಿಗೆ ಸರಿಯಾಗಿ ನಾವು ಸ್ಪಂದಿಸಿದಾಗ ಮಾತ್ರ ಮಕ್ಕಳು ಎಲ್ಲಾ ರಂಗಗಳಲ್ಲಿ ಉನ್ನತಿ ಪಡೆಯಲು ಸಾಧ್ಯ. ಪ್ರತಿ ವರ್ಷ ಇಂತಹ ಕ್ರೀಡಾಕೂಟಗಳ ಜೊತೆಗೆ ನಮ್ಮ ಪುರಾತನ ಕಲೆಗಳಾದ ಮನರಂಜನೆ ಸಾಂಸ್ಕøತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ನಮ್ಮ ಪೂರ್ವಜರ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕು. ಅಂತರಾಷ್ಟ್ರೀಯಾ ಒಲಂಪಿಕ್ ಕ್ರೀಡೆಯಂತಹ ಸ್ಪರ್ಧೆಯಲ್ಲಿ ನಮ್ಮ ಗ್ರಾಮಾಂತರ ಕ್ರೀಡಾಪಟುಗಳನ್ನು ಭಾಗವಹಿಸುವಂತೆ ದೈಹಿಕ ಶಿಕ್ಷಕರು ಶ್ರಮ ಹಾಕಬೇಕು ನಿರ್ಲಕ್ಯ ತೋರಿದಲ್ಲಿ ವಿದ್ಯಾರ್ಥಿಗಳು ಗ್ರಾಮಾಂತರ ಮಟ್ಟಕ್ಕೆಷ್ಟೆ ಸೀಮಿತರಾದಲ್ಲಿ ನಾವೇನೂ ಸಾಧಿಸಿದಂತಾಗುವುದಿಲ್ಲ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಉತ್ತಮವಾದ ಆಟದ ಮೈದಾನ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಲಾಗಿದ್ದು. ಗ್ರಾಮಾಂತರ ಕ್ರೀಡಾ ಪಟುಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ಸಂಸ್ಕಾರವನ್ನು ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಬೇಕೆಂದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಲೋಚನಮ್ಮ ಪಾಲಾಕ್ಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೀವ್ ತಾಲ್ಲೂಕು ದೈಹಿಕ ಶಿಕ್ಷಾಧಿಕಾರಿ ಗಾಳಿ ರವಿ ಪ್ರಾ.ಶಾ.ಶಿ. ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ತಾ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಕಾರ್ಯದರ್ಶಿ ಸುರೇಶ್ ಮಾಳಗಿ, ಉಪಾಧ್ಯಕ್ಷ ಜೀವ್ಲಾನಾಯ್ಕ್ ತಾ. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೊಡ್ಡಪ್ಪ ಸೇರಿದಂತೆ ಪಧಾಧಿಕಾರಿಗಳು ದೈಹಿಕ ಶಿಕ್ಷಕರು ಇನ್ನೂ ಮುಂತಾದವರಿದ್ದರು.

Leave a Comment