ಗ್ರಹದ ಸ್ಥಾನಮಾನ ವಂಚಿತ ಫ್ಲೊಟೋ

ಉತ್ತನೂರು ವೆಂಕಟೇಶ್

ಸೌರಮಂಡಲದಲ್ಲಿದ್ದರೂ ಇತರೇ ಗ್ರಹಗಳಿಗೆ ಇರುವಂತಹ ಗ್ರಹದ ಸ್ಥಾನಮಾನದಿಂದ ವಂಚಿತವಾಗಿ ಕುಬ್ಜ ಗ್ರಹವಾಗಿಯೇ ಪರಿಗಣಿಸಲ್ಪಟ್ಟಿದ್ದ ಫ್ಲೊಟೊಗೆ ಈಗ ಶುಕ್ರ ದೆಶೆ ಪ್ರಾರಂಭವಾಗಿದೆ. ಫ್ಲೊಟೋಗೆ ಗ್ರಹದ ಸ್ಥಾನಮಾನ ನೀಡದಿರುವ ವಿಜ್ಞಾನಿಗಳ ಲೆಕ್ಕಾಚಾರವೇ ತಪ್ಪು. ಅದಕ್ಕೆ ಗ್ರಹವೆನಿಸಿಕೊಳ್ಳುವ ಎಲ್ಲ ಅರ್ಹತೆಗಳೂ ಇವೆ ಎಂಬ ಕೂಗಿಗೆ ಈಗ ಹೆಚ್ಚಿನ ಚಾಲನೆ ಸಿಕ್ಕಿದೆ.

ಸೌರ ಮಂಡಲವೂ 9 ಗ್ರಹಗಳಲ್ಲಿ ಕಟ್ಟ ಕಡೆಯ ಗ್ರಹವಾಗಿರುವ ಫ್ಲೊಟೊಗೆ ಗ್ರಹದ ಸ್ಥಾನಮಾನ ನೀಡಲು ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಒಕ್ಕೂಟ ತಿರಸ್ಕರಿಸಿತ್ತು ಹಾಗೂ ಇದನ್ನು ಕುಬ್ಜ ಗ್ರಹವೆಂದೇ ಕರೆದಿತ್ತು.

ಆದರೆ ನಾಸಾದ ನ್ಯೂ ಹೊರೈಸಾನ್ ಬಾಹ್ಯಾಕಾಶ ನೌಕೆ ಫ್ಲೊಟೊದಲ್ಲಿ ಅಧ್ಯಯನ ನಡೆಸಿದ ನಂತರದಲ್ಲಿ ಕಲೆ ಹಾಕಿದ ವೈಜ್ಞಾನಿಕ ಮಾಹಿತಿಯಿಂದ ಇದು ಇತರ ಗ್ರಹಗಳಂತೆ ಗ್ರಹವೆನಿಸಿಕೊಳ್ಳುವ ಎಲ್ಲ ಅರ್ಹತೆ ಪಡೆದಿದೆ ಎಂಬ ವಾದ ಬಲಗೊಂಡಿತು.

ಗ್ರಹವೆಂದು ಪರಿಗಣಿಸಲು ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಒಕ್ಕೂಟ ಅನುಸರಿಸಿರುವ ಮಾನದಂಡಗಳೇ ಸರಿ ಇಲ್ಲ. ಪಕ್ಷಪಾತದಿಂದ ಕೂಡಿವೆ ಎಂಬುದು ಈಗಿನ ವಾದ. ಹೀಗಾಗಿ ಫ್ಲೊಟೊಗೂ ವೈಜ್ಞಾನಿಕ ಜಗತ್ತಿನಲ್ಲೂ ಗ್ರಹದ ಅಧಿಕೃತ ಸ್ಥಾನಮಾನ ಸಿಗುವ ದಿನಗಳು ದೂರವಿಲ್ಲ.

16vichara1

ಸೂರ್ಯ ಅಧಿಪತಿಯಾಗಿರುವ ಸೌರಮಂಡಲದಲ್ಲಿ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಮತ್ತು ಫ್ಲೊಟೊ ಈ ೯ ಗ್ರಹಗಳು ಇದ್ದರೂ ವಿಜ್ಞಾನಿಗಳ ಗುಂಪೊಂದು ಮಾತ್ರ ಫ್ಲೊಟೊ ಅನ್ನು ಗ್ರಹಗಳ ಪಟ್ಟಿಯಿಂದ ದೂರವಿಟ್ಟು ಸೌರಮಂಡಲದಲ್ಲಿ ೮ ಗ್ರಹಗಳು ಮಾತ್ರ ಎಂದು ಪ್ರತಿಪಾದಿಸುತ್ತ ಬಂದಿದ್ದಾರೆ.

ಅಂತರಾಷ್ಟ್ರೀಯ ವಿಜ್ಞಾನಿಗಳ ಒಕ್ಕೂಟ ೨೦೦೬ರಲ್ಲಿ ಸೌರಮಂಡಲದ ೯ನೇ ಗ್ರಹವಾದ ಫ್ಲೊಟೊವನ್ನು ಗ್ರಹದ ಪಟ್ಟದಿಂದ ಇಳಿಸಿ ಸೂರ್ಯನಿಗೆ ಇರುವುದು ೮ ಗ್ರಹಗಳು ಮಾತ್ರ ಎಂದು ಸಾರಿತು. ಫ್ಲೊಟೊ ಅನ್ನು ಕುಬ್ಜ ಗ್ರಹ ಎಂದು ಕರೆಯಿತು.

ತಮ್ಮ ಈ ಲೆಕ್ಕಾಚಾರವನ್ನು ಸಮರ್ಥಿಸಿಕೊಂಡಿದ್ದ ವಿಜ್ಞಾನಿಗಳ ತಂಡ ಒಂದು ಗ್ರಹಕ್ಕೆ ಇರಬೇಕಾದ ಗುರುತ್ವಾಕರ್ಷಣಾ ಸಾಮರ್ಥ್ಯ ಪ್ಲೊಟೊನಲ್ಲಿ ಇಲ್ಲ. ಹೀಗಾಗಿಯೇ ಸಮೀಪದ ಮತ್ತೊಂದು ಗ್ರಹ ಇದರ ಕಕ್ಷೆಯನ್ನು ಛೇದಿಸುತ್ತದೆ. ಹಾಗೂ ನೆರೆಯ ಗ್ರಹದ ಗುರುತ್ವಾಕರ್ಷಣೆ ಇದರ ಗುರುತ್ವಾಕರ್ಷಣೆ ಮೇಲೆ ಪ್ರಭಾವ ಬೀರುತ್ತದೆ ಎಂದು ವಾದಿಸಿದ್ದರು. ಪ್ಲೊಟೊ ತನ್ನ ಕಕ್ಷೆಯನ್ನು ಪಕ್ಕದ ಗ್ರಹವಾದ ನೆಪ್ಚೂನ್ ಕಕ್ಷೆಯಲ್ಲಿ ವಿಸ್ತರಿಸುವುದನ್ನೆ. ತಮ್ಮ ವಾದಕ್ಕೆ ಬಳಸಿಕೊಂಡಿದ್ದ ವಿಜ್ಞಾನಿಗಳು, ಫ್ಲೂಟೊದ ಗುರುತ್ವಾಕರ್ಷಣಾ ಬಲ ದುರ್ಬಲವಾಗಿರುವುದರಿಂದಲೇ ಇದರ ಕಕ್ಷೆ ಇತರ ಗ್ರಹಗಳ ಕಕ್ಷೆಯತ್ತ ವ್ಯಾಪಿಸುವಂತಾಗಿದೆ ಎಂದಿದ್ದರು.

ಆದರೆ, 2006ರಲ್ಲಿ ನಾಸಾ ಫ್ಲೊಟೊದ ಅಧ್ಯಯನಕ್ಕೆಂದು ‘ನ್ಯೂ ಹೊರೈಸನ್ ಬಾಹ್ಯಾಕಾಶ ನೌಕೆಯನ್ನು ಆ ಗ್ರಹದತ್ತ ಉಡಾವಣೆ ಮಾಡಿತ್ತು. ಆ ನೌಕೆ ಫ್ಲೊಟೊ ಸುತ್ತಲೂ ೬ ತಿಂಗಳ ಕಾಲ ಸುತ್ತು ಹಾಕುತ್ತ ಗ್ರಹದ ಬಗ್ಗೆ ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಕಲೆ ಹಾಕಿತ್ತು. ಇದರ ಆಧಾರದಲ್ಲಿ ಈ ಶೋಧನೆಯ ಮುಖ್ಯ ವಿಜ್ಞಾನಿ ಅಲನ್ ಸ್ಟುರ್ನ್, ಫ್ಲೊಟೊಗೆ ಗ್ರಹವೆನಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಇವೆ ಎಂದು ಹೇಳಿದರು. ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡ ಫ್ಲೊಟೊ ಗ್ರಹದ ಬಗ್ಗೆ ಪಕ್ಷಪಾತ ತೋರಿದೆ. ಗ್ರಹವೆಂದು ಪರಿಗಣಿಸಲು ಅವರು ಅನುಸರಿಸಿರುವ ಮಾನದಂಡಗಳು ಪಕ್ಷಪಾತದಿಂದ ಕೂಡಿವೆ ಎಂದೂ ಹೇಳಿದರು.

ಫ್ಲೊಟೊದ ಕಕ್ಷೆಯ ಅತಿಕ್ರಮದ ಮೇಲೆ ಅದನ್ನು ಗ್ರಹವಲ್ಲ ಎನ್ನುವುದಾದರೆ, ಒಂದಲ್ಲ ಒಂದು ಹಂತದಲ್ಲಿ ಭೂಮಿ, ಮಂಗಳ, ಗುರು ಹಾಗೂ ನೆಪ್ಚೂನ್ ಗ್ರಹಗಳನ್ನು ಗ್ರಹಗಳು ಅಲ್ಲ ಎನ್ನಬೇಕಾಗುತ್ತದೆ. ಇವುಗಳ ಕಕ್ಷೆಯಲ್ಲೂ ಕ್ಷುದ್ರಗ್ರಹಗಳು ಕಕ್ಷೆ ವಿಸ್ತರಿಸಿವೆ ಎಂದಿದ್ದ ಅಲಿನ್ ಸ್ಟನ್ ಹೇಳಿಕೆಯನ್ನು ಅಮೆರಿಕಾದ ಜಾನ್ಸ್ ಆಫ್ನಿನ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಕಿಱ್ಬಿ ಮನ್ಸಾನ್ ಸಮರ್ಥಿಸಿದರು. ಗ್ರಹಗಳಿಗೆ ಇರಬೇಕಾದ ಗುರುತ್ವಾಕರ್ಷಣಾ ಬಲ ಫ್ಲೊಟೊಗೆ ಇದೆ. ಹೀಗಾಗಿಯೇ ಅದು ತನ್ನ ಗೋಳಾಕಾರದ ವರ್ತುಲವನ್ನು ಕಾಪಾಡಿಕೊಂಡು ಬಂದಿದೆ ಎಂದೂ ಕಿಱ್ಬಿ ಮನ್ಸಾನ್ ಹೇಳಿದರು.

೧೯೩೦ರಲ್ಲಿ ಫ್ಲೊಟೊ ಗ್ರಹವನ್ನು ಪತ್ತೆ ಹಚ್ಚಲಾಯಿತು. ಯುರೇನಸ್ ಮತ್ತು ನೆಪ್ಚೂನ್ ಆಚೆಗೂ ಗ್ರಹವೊಂದು ಇರುವ ಬಗ್ಗೆ ಅಭಿಪ್ರಾಯಪಟ್ಟ ಖಗೋಳ ವಿಜ್ಞಾನಿಗಳು ನಡೆಸಿದ ಶೋಧನೆಯಿಂದ ಫ್ಲೊಟೊ ಗ್ರಹ ಪತ್ತೆಯಾಗಿತ್ತು. ಇದು ಅಜ್ಞಾತದಲ್ಲಿ ಉಳಿಯಲು ಕಾರಣ. ಇದು ಸೌರಮಂಡಲದ ಕೊನೆಯ ಗ್ರಹವಾಗಿದ್ದು, ಸೂರ್ಯನಿಂದ ಭಾರಿ ದೂರದಲ್ಲಿರುವುದು. ಇದು ಸೂರ್ಯನಿಂದ ಸರಾಸರಿ ೪೪೨೫ ದಶಲಕ್ಷ ಕಿ.ಮೀ. ದೂರದಲ್ಲಿವೆ. ಹೀಗಾಗಿ ಇದಕ್ಕೆ ಸಿಗುವ ಬೆಳಕು ದುರ್ಬಲ. ಇಲ್ಲಿ ಶಾಖಾ, ಬೆಳಕು ಎರಡೂ ಕಡಿಮೆ. ಹೀಗಾಗಿ, ಬರೀಗಣ್ಣಿಗೆ ಇದು ಕಾಣುವುದಿಲ್ಲ.

Leave a Comment