ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಿ : ಕಿರಣ್‍ಮಿರಜ್ಕರ್

ಹಿರಿಯೂರು.ಆ.13: ಗ್ರಂಥಾಲಯದಲ್ಲಿ ಮಕ್ಕಳು, ಹಿರಿಯರು, ವಿದ್ಯಾರ್ಥಿಗಳು , ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಹೀಗೆ ಎಲ್ಲರಿಗೂ ಅಗತ್ಯವಾದಂತಹ ಪುಸ್ತಕಗಳು ಸಿಗುತ್ತವೆ ಇಂತಹ ಗ್ರಂಥಾಲಯಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾಹಿತಿ ಎಂ.ಕಿರಣ್‍ಮಿರಜ್ಕರ್ ಹೇಳಿದರು, ನಗರದ ಕೃಷ್ಣರಾಜೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯ ಪಿತಾಮಹ ಎಂದೇ ಹೆಸರಾಗಿರುವ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ರವರ ಜನ್ಮದಿನಾಚರಣೆಯನ್ನು ಇಂದು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ಅವರು ನೀಡಿರುವ ಇಂತಹ ಸುವರ್ಣಾವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು ಹಾಗೂ ಪ್ರತೀ ದಿನ ಗ್ರಂಥಾಲಯಕ್ಕೆ ಬರುವ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು. ಕನ್ನಡ ಸಾಹಿತ್ಯ ಪರಿಷತ್ ಐಮಂಗಲ ಹೋಬಳಿ ಘಟಕದ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿಯವರು ಮಾತನಾಡಿ ಡಾ.ಎಸ್.ಆರ್.ರಂಗನಾಥನ್ ರವರು ತಮಿಳುನಾಡಿನಲ್ಲಿ ಜನಿಸಿದ್ದು ಇವರು ಗ್ರಂಥಾಲಯ ವಿಜಾÐನಕ್ಕೆ ನೀಡದೇ ಇರುವ ಸೇವೆಗಳಿಲ್ಲ 1935ರಲ್ಲಿ ಬ್ರಿಟನ್ ಸರ್ಕಾರ ಇವರಿಗೆ ರಾವ್ ಸಾಹೇಬ್ ಬಿರುದನ್ನು ನೀಡಿದೆ, 1957ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು, ಅವರು ಹಾಕಿಕೊಟ್ಟ ದಾರಿಯಲ್ಲಿ ಇಂದು ನಮ್ಮೆಲ್ಲರಿಗೂ ಗ್ರಂಥಾಲಯ ಜ್ಞಾನ ಬಂಢಾರ ನೀಡುತ್ತಿದೆ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಿ ಎಂದರು, ಜೆ.ಡಿ.ಎಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಿಶ್ವನಾಥ್ ರವರು ಮಾತನಾಡಿ ಪುಸ್ತಕಗಳನ್ನು ಓದುವುದರಿಂದ ಜ್ಞಾನ ಬಂಢಾರ ಹೆಚ್ಚಾಗುತ್ತದೆ ಆದುದರಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಗ್ರಂಥಾಲಯ ಸಹಾಯಕಿ ತಿಪ್ಪಮ್ಮ, ಬುಡೇನ್‍ಬಿ, ರಾಮಚಂದ್ರಪ್ಪ, ಜಿ.ಆರ್.ವಿಶ್ವನಾಥ್, ಗೌಡೇಶ್, ಗೌರಮ್ಮ, ವೆಂಕಮ್ಮ, ಪುಷ್ಪ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment