ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಾಯ

 

ಸೇಡಂ,ಮೇ.22-ಪಟ್ಟಣದ ಮೋಮಿನಪುರ ಬಡಾವಣೆಯ ಮನೆಯೊಂದರಲ್ಲಿ ಇಂದು ಬೆಳಗಿನಜಾವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟಿದ್ದಾನೆ.

ರಾಜು ಬಸಪ್ಪ ತಾಯಿತ್ (50) ಎಂಬಾತ ಮೃತಪಟ್ಟಿದ್ದು, ಮೃತನ ತಾಯಿ ಗಂಗಮ್ಮ ಬಸಪ್ಪ ತಾಯಿತ್ (70), ಪತ್ನಿ ಸುಮಾ ರಾಜು ತಾಯಿತ್ (40), ಮಗ ಬಸಪ್ಪ ರಾಜು ತಾಯಿತ್ (22) ಅವರು ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment