ಗ್ಯಾಟೋರೇಡ್‌ ಬ್ರ್ಯಾಂಡ್‌ ರಾಯಭಾರಿಯಾಗಿ ಹಿಮಾ ದಾಸ್‌ ನೇಮಕ

ನವದೆಹಲಿ, ಸೆ 12 – ಗ್ಯಾಟೋರೇಡ್ ಇಂಡಿಯಾ ಸಂಸ್ಥೆಯು ತನ್ನ ಬ್ರ್ಯಾಂಡ್‌ ರಾಯಭಾರಿಯಾಗಿ ಭಾರತದ ಚಿನ್ನದ ಓಟಗಾರ್ತಿ ಹಿಮಾ ದಾಸ್‌ ಅವರನ್ನು ನೇಮಕ ಮಾಡಿ ಪ್ರಕಟಿಸಿದೆ. ಆ ಮೂಲಕ ದೇಶದ ಬ್ರ್ಯಾಂಡ್‌ ರಾಯಭಾರಿಗಳಾದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಹಾಗೂ ನೀರಜ್‌ ಚೋಪ್ರಾ ಅವರ ಸಾಲಿಗೆ ಹಿಮಾದಾಸ್‌ ಸೇರ್ಪಡೆಯಾದರು.
ಬ್ರ್ಯಾಂಡ್ ತನ್ನ ‘ನಥಿಂಗ್ ಬೀಟ್ಸ್ ಗ್ಯಾಟೋರೇಡ್’ ತತ್ವಶಾಸ್ತ್ರಕ್ಕೆ ಹೊಸ ತಿರುವು ನೀಡುವ ಮೂಲಕ ಸ್ಪ್ರಿಂಟ್‌ ರನ್ನರ್‌ಗೆ ಗೌರವ ಸಲ್ಲಿಸಲಿದೆ. ಗ್ಯಾಟೋರೇಡ್ ಇಂಡಿಯಾ ಸಹಭಾಗಿತ್ವದ ಅವಧಿಯಲ್ಲಿ ಹಿಮಾ ದಾಸ್ ಅವರೊಂದಿಗೆ ತರಬೇತಿ ಮತ್ತು ರೇಸ್-ಡೇ ಪೌಷ್ಠಿಕಾಂಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿದೆ.

“ಜಗತ್ತಿನಾದ್ಯಂತ ಕ್ರೀಡಾ ದಂತಕಥೆಗಳನ್ನು ಒಳಗೊಂಡಿರುವ ಗ್ಯಾಟೋರೇಡ್ ಕುಟುಂಬಕ್ಕೆ ಸೇರಿರುವುದು ಅತ್ಯಂತ ಹೆಚ್ಚು ಗೌರವ ಸಿಕ್ಕಂತಾಗಿದೆ. ಗ್ಯಾಟೋರೇಡ್‌ ಜತೆ ಕೆಲಸ ಮಾಡಲು ಮತ್ತು ನನ್ನ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ನಾನು ಎದುರು ನೋಡುತ್ತಿದ್ದೇನೆ ” ಎಂದು ಹಿಮಾ ದಾಸ್‌ ಹೇಳಿದರು.
“ಹಿಮಾ ದಾಸ್ ಅವರನ್ನು ಗ್ಯಾಟೋರೇಡ್ ಕ್ರೀಡಾಪಟುಗಳ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ” ಎಂದು ಪೆಪ್ಸಿ ಕೋ ಇಂಡಿಯಾದ ಹೈಡ್ರೇಶನ್ ಮತ್ತು ಕೋಲಾದ ಮಾರ್ಕೆಟಿಂಗ್ ನಿರ್ದೇಶಕ ತರುಣ್ ಭಗತ್ ಹೇಳಿದರು.

Leave a Comment