ಗೌಳಿ ಸಮಾಜ: ಶ್ರೀ ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ

ರಾಯಚೂರು.ಅ.11- ನಗರದ ವೀರಶೈವ ಗೌಳಿ ಸಮಾಜ ವತಿಯಿಂದ ಶರನ್ನವರಾತ್ರಿ ಅಂಗವಾಗಿ 36 ನೇ ವರ್ಷದ ಶ್ರೀ ಅಂಬಾ ಭವಾನಿ ಮೂರ್ತಿ ಅತಿ ವಿಜೃಂಭಣೆಯಿಂದ ಸ್ಥಳೀಯ ಬಂಗಿಕುಂಟಾ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ನಗರದ 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದಲ್ಲಿ ಶ್ರೀ ಅಂಬಾ ಭವಾನಿ ಮೂರ್ತಿಗೆ ಶ್ರೀ ಶಾಂತಮಲ್ಲಾ ಶಿವಾಚಾರ್ಯ ಸ್ವಾಮಿಗಳು ಪೂಜೆ ನೆರವೇರಿಸಿದ ನಂತರ ವಿವಿಧ ವಾದ್ಯ, ಕಳಸದೊಂದಿಗೆ ಮೆರವಣಿಗೆ ಮಾಡಿ ಬಂಗಿಕುಂಟಾದಲ್ಲಿರುವ ಶ್ರೀ ಭವಾನಿ ವೃತ್ತದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಅಂಬಾ ಭವಾನಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಸಮಾಜದ ಮುಖಂಡರು ಪರಸ್ಪರ ಗುಲಾಲ್ ಎರಚಿಕೊಂಡು ವಿವಿಧ ವಾದ್ಯ-ಮೇಳಗಳಿಗೆ ಕುಣಿದರು.
ಈ ಸಂದರ್ಭದಲ್ಲಿ ಗೌಳಿ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

Leave a Comment