ಗೋಸಾಗಾಟಕ್ಕೆ ಭಜರಂಗದಳ ಕಾರ್ಯಕರ್ತರಿಂದ ತಡೆ

ಕಾರ್ಕಳ, ಮಾ.೧೫- ಕೃಷಿ ಸಂಬಂಧಿ ಕೆಲಸಕ್ಕಾಗಿ ಜಾನುವಾರುಗಳನ್ನು ಕರೆದೊಯ್ಯುತ್ತಿದ್ದ ರೈತರನ್ನು ಭಜರಂಗದಳದ ಕಾರ್ಯಕರ್ತರು ತಡೆದು ಪೆÇಲೀಸರಿಗೊಪ್ಪಿಸಿದ ಘಟನೆ ಈದು ಎಂಬಲ್ಲಿ ತಡರಾತ್ರಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಳ್ಳಿ ಗ್ರಾಮದ ರೈತ ಶಿವು ಎಂಬವರು ಕೃಷಿ ಚಟುವಟಿಕೆಗೆ ಜಾನುವಾರು ಖರೀದಿಗಾಗಿ ಚಾಲಕ ಪ್ರೆÃಮ್ ಕುಮಾರ್ ಎಂಬವರ ಜೊತೆ ಟೆಂಪೆÇದಲ್ಲಿ ಕಾರ್ಕಳ ತಾಲೂಕಿನ ಮಾಳ ಎಂಬಲ್ಲಿಗೆ ನಿನ್ನೆ ಮಧ್ಯಾಹ್ನ ಆಗಮಿಸಿದ್ದರು. ಅಲ್ಲಿ ನಾಗರಾಜ ಪÇಜಾರಿ ಎಂಬವರಿಂದ ೫೦ ಸಾವಿರ ರೂ. ನಗದು ನೀಡಿ ಏಳು ಜಾನುವಾರು ಮತ್ತು ಕರುವೊಂದನ್ನು ಖರೀದಿಸಿದ್ದರು. ಹೀಗೆ ಖರೀದಿಸಿದ ಜಾನುವಾರುಗಳನ್ನು ಶಿವು ಟೆಂಪೆÇದಲ್ಲಿ ಹೇರಿಕೊಂಡು ಮಂಡ್ಯದತ್ತ ಹೊರಟಿದ್ದ ವೇಳೆ ಭಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ ಎಂದು ದೂರಲಾಗಿದೆ. ಈದು ಎಂಬಲ್ಲಿ ಬೈಕ್‌ನಲ್ಲಿ ಬಂದ ಭಜರಂಗದಳದ ಕಾರ್ಯಕರ್ತರು ಶಿವು ಅವರ ಟೆಂಪೆÇವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ೨೫ರಿಂದ ೩೦ರಷ್ಟು ಭಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಶಿವು ಅವರನ್ನು ಜಾನುವಾರು ಬಗ್ಗೆ ಪ್ರಶ್ನಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಖರೀದಿಸಿ ಕೊಂಡೊಯ್ಯುತ್ತಿರುವುದಾಗಿ ಶಿವು ಸ್ಪಷ್ಟಪಡಿಸಿದಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭಜರಂಗದಳದವರು ಕೇಳಿ ಪರಿಶೀಲಿಸಿದ್ದಾರೆ. ಬಳಿಕ ಭಜರಂಗ ದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೆÇಲೀಸರು ಶಿವು, ಚಾಲಕ ಪ್ರೆÃಮ್ ಕುಮಾರ್ ಹಾಗೂ ಜಾನುವಾರುಗಳ ಸಹಿತ ಟೆಂಪೆÇವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಜಾನುವಾರು ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ಪರಿಶೀಲಿಸಿ ಖಚಿತಪಡಿಸಿದ್ದಾರೆ. ಅಲ್ಲದೆ ಮಂಡ್ಯದ ರೈತ ಮುಖಂಡರಿಗೆ ದೂರವಾಣಿ ಕರೆ ಮಾಡಿ ಶಿವು ಕೃಷಿಕ ಎಂಬುದನ್ನು ದೃಢಪಡಿಸಿಕೊಂಡು ಅವರನ್ನು ಜಾನುವಾರು ಸಹಿತ ಹೋಗಲು ಬಿಟ್ಟಿದ್ದೆÃವೆ ಎಂದು ಪೆÇಲೀಸರು ತಿಳಿಸಿದ್ದಾರೆ.

Leave a Comment