ಗೋವಿನಜೋಳಕ್ಕೆ ಕೀಟಬಾಧೆ

ಮುಂಡಗೋಡ ಜು,12- ತಾಲೂಕಿನ ಗೋವಿನಜೋಳ ಬೆಳೆಗಾರರಲ್ಲಿ, ಪ್ರಸಕ್ತ ಕೃಷಿ ಹಂಗಾಮಿನ ಹುಮ್ಮಸ್ಸು, ಖುಷಿ ಈಗ ಅರ್ಧಂಬರ್ದ ಕಡಿಮೆಯಾಗಿದ್ದು, ಗೋವಿನಜೋಳ ಬಿತ್ತನೆ ಮಾಡಿದಂತಹ ತಾಲೂಕಿನ ರೈತರಿಗೆ ಒಂದು ಕಡೆ ಮಳೆಯಿಂದ ಕುಂಟಿತಗೊಳ್ಳುತ್ತಿದ್ದರೆ, ಇನ್ನೊಂದು ಕಡೆಗೆ ರೋಗಬಾಧೆಯಿಂದ ಗೋವಿನಜೋಳದ ಬೆಳೆ ಸಂಕಷ್ಟದಲ್ಲಿ ಸಿಲುಕಿದೆ.
ಕಳೆದ 5-6 ವರ್ಷಗಳ ಅವಧಿಯಲ್ಲಿ ಮಳೆಯ ಅಭಾವವನ್ನು ಅವಲೋಕಿಸಿದ,  ತಾಲೂಕಿನ ರೈತರು, ಪ್ರಸಕ್ರ ವರ್ಷ ಭತ್ತ ಬಿತ್ತನೆ ಮಾಡುವ ಪ್ರದೇಶದಲ್ಲಿಯು ಸೇರಿದಂತ್ತೆ, ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದರು, ಅದರಂತೆ ಬಿತ್ತನೆ ಮಾಡಿದ ಗೋವಿನಜೋಳ ಚನ್ನಾಗಿ ಹುಟ್ಟಿ ಬಂದಿತ್ತು, ನಂತರ ನಿರಂತರ ಬಿಡುವಿಲ್ಲದ ಮಳೆಯಿಂದ ಹೆಚ್ಚಿನ ಹಸಿ ತೆವಾಂಶದಿಂದಾಗಿ ಗೋವಿನಜೋಳ ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆಯಲ್ಲಿ ಕುಂಟಿತಗೊಂಡಿದೆ, ಮುಂದಿನ ದಿನಗಳಲ್ಲಿ ಮಳೆರಾಯ ಬಿಡುವು ನೀಡಿದರೆ, ಇದ್ದ ಬೆಳೆಯನ್ನು ಹೇಗಾದರು ರಕ್ಷಿಸಿಕೊಂಡರಾಯ್ತು ಎನ್ನುವಷ್ಟರಲ್ಲಿ, ಕ್ಯಾದಗಿ ರೋಗ, ಸುಳಿರೋಗ ಹೀಗೆ  ರೋಗಬಾಧೆ ಗೋವಿನಜೋಳಕ್ಕೆ

ಆವರಿಸಿಕೊಳ್ಳುತ್ತಿದ್ದು, ರೈತ ಔಷಧಿ ಗೊಬ್ಬರ ಸಿಂಪರಣೆಗೂ ಮಳೆ ಅವಕಾಶ ಮಾಡಿಕೊಡದಿರುವುದರಿಂದ ರೈತ ಚಿಂತಾಜನಕ ಸ್ಥೀತಿಯಲ್ಲಿ ಕಾಲಕಳೆಯುವಂತಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ತಾಲೂಕಿನಲ್ಲಿ ಹೆಚ್ಚಿಗೆ ಮಳೆ ಬಿಳುತ್ತಿದ್ದು, ತಾಲೂಕಿನಲ್ಲಿ ಭತ್ತದ ಬೆಳೆ ಚನ್ನಾಗಿದೆ. ಆದರೆ ಬಿಡುವಿಲ್ಲದ ಮಳೆಯಿಂದ ಭತ್ತದ ಮಧ್ಯ ಬರುವು ಕುಂಟೆ ಹೊಡೆಯುವುದಕ್ಕೆ ಅನುವು ಮಾಡಿಕೊಡದೆ ಭತ್ತದಲ್ಲಿ ಹುಲ್ಲಿನ ಪ್ರಮಾಣ ಹೆಚ್ಚಾಗಿದ್ದು,  ಮಳೆ ಬಿಡುವು ನೀಡಿದರು ಬರುವು ಕುಂಟೆ ಹೊಡೆಯುವುದಕ್ಕೆ ಆಗದ ಸ್ಥೀತಿಯಲ್ಲಿ ಭತ್ತದ ಭೂಮಿಯಲ್ಲಿ ನೀರು ನಿಂತಿರುವುದರಿಂದ, ಈಗ ರೈತರು ಭತ್ತದ ಜಮೀನಿನಲ್ಲಿ  ನೀರು ಕುಂಟೆ ಹೊಡೆಯುವಲ್ಲಿ ಮಗ್ನರಾಗಿದ್ದಾರೆ.

Leave a Comment