ಗೋವಾ ಮಹಿಳೆ ಅತ್ಯಾಚಾರ ಪ್ರಕರಣ ಓರ್ವನ ಬಂಧನ

ನವದೆಹಲಿ, ಅ ೨೧- ಗೋವಾ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸೆ. 16 ರಂದು ಈ ಘಟನೆ ನಡೆದಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ರಾಯ್ ಬರೇಲಿಯ 4,000 ಚಿಂದಿ ಆಯುವವರನ್ನು ವಿಚಾರಣೆಗೆ ಗುರಿಪಡಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.
ಗೋವಾದಿಂದ ದೆಹಲಿಗೆ ಬಂದಿದ್ದ ಮಹಿಳೆ ಬಸ್ಸಿಗಾಗಿ ಕಾಯುತ್ತಿದ್ದರು. ತಾನು ತಲುಪಬೇಕಾಗಿದ್ದ ಸ್ಥಳಕ್ಕೆ ಮುಂಚಿತವಾಗಿ ತಲುಪಿದ್ದರಿಂದ ಇಂದ್ರಪ್ರಸ್ಥ ಪಾರ್ಕ್ ಬಸ್ ನಿಲ್ದಾಣದ ಸಮೀಪ ರಾತ್ರಿ ಕಳೆಯಲು ತೀರ್ಮಾನಿಸಿದ್ದರು. ಈಕೆ ಇಬ್ಬರು ಪುರುಷರೊಂದಿಗೆ ಮಲಗಿದ್ದಳು. ಅಬ್ದುಲ್ ಖಾಲೀದ್ ಮತ್ತು ಮುನ್ನ ಈಕೆಯನ್ನು ಬಸ್ ನಿಲ್ದಾಣದ ಹಿಂಭಾಗ ಎಳೆದುಕೊಂಡು ಹೋಗಿ ರಿಂಗ್ ರಸ್ತೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈಕೆ ಪ್ರತಿರೋಧ ಒಡ್ಡಿದ್ದರೂ ಸಹ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬೈಕ್ ಸವಾರ‌ರೊಬ್ಬರ ಸಹಾಯದಿಂದ ಕಾಮುಕರ ಕಪಿ ಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಪೈಕಿ ಖಾಲೀದ್ ನನ್ನು ಬಂಧಿಸಲಾಗಿದೆ. ಆದರೆ ಮತ್ತೊಬ್ಬ ಆರೋಪಿ ಮುನ್ನ ನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ವಿಚಾರಣೆ ವೇಳೆ ಖಾಲೀದ್ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಚಿನ್ಮಾಯ್ ಬಿಸ್ವಾಲ್ ತಿಳಿಸಿದ್ದಾರೆ. ಆರೋಪಿ ಖಾಲೀದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.

Leave a Comment