ಗೋಲ್ಡನ್ ವೀಸಾದಲ್ಲಿ ಲಂಡನ್‌ಗೆ ನುಗ್ಗಿದ ನೀರವ್

ಲಂಡನ್, ಮಾ ೧೫-ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಹೂಡಿಕೆದಾರರ ಗೋಲ್ಡನ್ ವೀಸಾದಲ್ಲಿ ಲಂಡನ್‌ಗೆ ಪ್ರವೇಶಿಸಿರುವ ಅಂಶ ಬೆಳಕಿಗೆ ಬಂದಿದೆ.
ಯುರೋಪಿಯನ್ ಒಕ್ಕೂಟದ ಹೊರಗಿರುವ ಹೂಡಿಕೆದಾರರು ೨೦ ಲಕ್ಷ ಪೌಂಡುಗಳನ್ನು ಇಂಗ್ಲೆಂಡ್ ಸರ್ಕಾರದ ಬಾಂಡ್ ಅಥವಾ ಕಂಪನಿಯ ಷೇರುಗಳನ್ನು ನೀಡಲು ಬದ್ದರಾರಿಬೇಕು. ಅಂತಹ ಹೂಡಿಕೆದಾರರಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನೀರವ್ ಮೋದಿಗೆ ಭಾರತದ ಪಾಸ್‌ಪೋರ್ಟ್ ನೀಡಲಾಗಿದೆ. ಜನವರಿ ೨೦೧೮ರಿಂದ ಮೋದಿ ಭಾರತದಿಂದ ಪರಾರಿಯಾಗಿದ್ದಾನೆ. ಕಳೆದ ವರ್ಷ ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡಿದ ನಂತರ ಜಾರಿ ನಿರ್ದೇಶನಾಲಯ ಮೋದಿಯನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು.
ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಅಥವಾ ಇಲ್ಲಿ ವ್ಯಾಪಾರ ಆರಂಭಿಸಲು ಬಯಸುವ ವ್ಯಕ್ತಿಗಳಿಗೆ ಮತ್ತು ಕೆಲಸ ಮಾಡುವವರಿಗೆ ಗೋಲ್ಡನ್ ವೀಸಾದಲ್ಲಿ ಅನುಮತಿ ಕಲ್ಪಿಸಲಾಗಿದೆ. ಗೋಲ್ಡನ್ ವೀಸಾ ಹೊಂದಿರುವ ವ್ಯಕ್ತಿ ಶಾಶ್ವತ ನಿವಾಸಿಗೆ ಅರ್ಹನಾಗುವ ಐದು ವರ್ಷಗಳ ಮುಂಚಿತವಾಗಿ ಒಂದು ಬಾರಿ ೨೦ ಲಕ್ಷ ಪೌಂಡುಗಳನ್ನು ಹೂಡಬೇಕು. ಹೂಡಿಕೆಯನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಬಯಸಿದರೆ ಸಾಗರೋತ್ತರ ರಾಷ್ಟ್ರಗಳಿಂದ ವೀಸಾಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ ಎಂದು ಮೂಲಗಳು ತಿಳಿಸಿವೆ. ಇದೇ ರೀತಿ ವೀಸಾ ಪಡೆದು ಸೆಂಟರ್ ಪಾಯಿಂಟ್ ಆಫ್ ಲಂಡನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ನಂಬಲಾಗಿದೆ.
ಆದರೆ ನೀರವ್ ಮೋದಿ ಲಂಡನ್ ಪ್ರವೇಶಿಸಿರುವ ನಿರ್ದಿಷ್ಟ ದಿನಾಂಕ ಇದುವರೆಗೂ ಗೊತ್ತಾಗಿಲ್ಲ. ಫೆಬ್ರವರಿ ಅಂತ್ಯದಲ್ಲಿ ನ್ಯೂಯರ್ಕ್‌ನಿಂದ ಇಂಗ್ಲೆಂಡ್‌ಗೆ ಬಂದಿದ್ದಾನೆ ಎಂದು ಹೇಳಲಾಗಿದೆ. ನವೆಂಬರ್ ೨೦೧೮ ರ ಆಸುಪಾಸಿನಲ್ಲಿ ಭಾರತದ ಪಾಸ್‌ಪೋರ್ಟ್ ಹಿಂತೆಗೆದುಕೊಂಡ ನಂತರ ಇಂಟರ್ ಪೋಲ್ ಮೋದಿ ಬಂಧನಕ್ಕೆ ರಡ್ ಕಾರ್ನರ್ ನೋಟೀಸ್ ಜಾರಿ ಮಾಡಿತ್ತು.

Leave a Comment