ಗೋರ್ಕಲ್ : ಹೈಟೆನ್ಷನ್ ತಂತಿ ಬಿದ್ದು 30 ಕುರಿ ಸಾವು

ಮಾನ್ವಿ.ಏ.02- ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಹೈಟೆನ್ಷನ್ ತಂತಿ ಹರಿದು ಬಿದ್ದ ಪರಿಣಾಮ 30 ಕುರಿಗಳು ಸಾವನ್ನಪ್ಪಿವೆ.
ದೊಡ್ಡ ಮಲ್ಲಯ್ಯ ಎನ್ನುವವರಿಗೆ ಸೇರಿದ ಈ ಕುರಿಗಳು ಹೊಲದಲ್ಲಿ ಮೇಯುತ್ತಿರುವಾಗ ಹೈಟೆನ್ಷನ್ ತಂತಿ ಸ್ಪರ್ಶದಿಂದ ಕುರಿಗಳು ಸಾವನ್ನಪ್ಪಿ, ಲಕ್ಷಾಂತರ ರೂ. ನಷ್ಟ ಉಂಟಾಗುವಂತೆ ಮಾಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೈಟೆನ್ಷನ್ ತಂತಿ ಹೇಗೆ ಹರಿದು ಬಿದ್ದಿದೆ ಎನ್ನುವುದು ಅಚ್ಚರಿಯಾಗಿದೆ. ಹೈಟೆನ್ಷನ್ ತಂತಿ ಪ್ರದೇಶದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಗೋರ್ಕಲ್‌ನಲ್ಲಿ ನಡೆದ ಘಟನೆ ಭಾರೀ ಆತಂಕಕ್ಕೆ ದಾರಿ ಮಾಡಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Leave a Comment