ಗೋಡೆ ಕುಸಿದು ಮಗು ಸಾವು

ಹುಳಿಯಾರು, ಆ. ೧೬- ಶಿಥಿಲಗೊಂಡ ಮನೆ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಗೋಡೆ ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ನಡುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಂಗರಾಜು ಅವರ ಮಗಳು ಪ್ರಣತಿ (3) ಮೃತ ದುರ್ದೈವಿ ಮಗು. ಈ ಮಗು ಸಂಪೂರ್ಣ ಶಿಥಿಲಗೊಂಡಿದ್ದ ಗೋಡೆ ಸಮೀಪ ಆಟವಾಡುತ್ತಿದ್ದಳು. ಆಗ ಗೋಡೆ ಕುಸಿದು ಮಗುವಿನ ಮೇಲೆ ಬಿದ್ದ ಪರಿಣಾಣ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮಗುವಿನ ಸಾವಿನಿಂದ ಪೋಷಕರ ರೋಧನ ಮನಕಲಕುವಂತಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಂದನಕೆರೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಜರುಗಿಸುತ್ತಿದ್ದಾರೆ.

Leave a Comment