ಗೋಡೆ ಕುಸಿದು ತಾಯಿಮಗು ಸಾವು

ದಾವಣಗೆರೆ.ಆ.14; ಗೋಡೆ ಕುಸಿದು ತಾಯಿಮಗು ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಜರುಗಿದೆ. ತಾಯಿ ಉಮಾ (30) ಹಾಗೂ ಮಗು ಧನುಷ್( 1) ಮೃತ ದುರ್ದೈವಿಗಳು. ನಿದ್ರಿಸುತ್ತಿರುವಾಗ ಬೆಳಗಿನ ಜಾವ ಗೋಡೆ ಕುಸಿತವಾಗಿ ಘಟನೆ ನಡೆದಿದೆ. ಮಲಗಿದ್ದ ತಾಯಿಮಗು ಮೇಲೆ ಗೋಡೆ ಕುಸಿದು ಬಿದ್ದಿದೆ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಅವರು ಚಿಕಿತ್ಸೆಗೆ ಸ್ಪಂದಿದ ಕಾರಣ ಇಬ್ಬರೂ ಮೃತಪಟ್ಟಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment