ಗೋಕಾಕ ಪಟ್ಟಣಕ್ಕೆ ನುಗ್ಗಿದ ನೀರು, ಜನರ ಅಸ್ತವ್ಯಸ್ತ

ಗೋಕಾಕ, ಆ 14- ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತು ಮಹಾರಾಷ್ಟ್ರದ ಕೊಯ್ನಾ ಡ್ಯಾಂ, ಜೊತೆಯಲ್ಲಿಯೆ
ಹಿಡಕಲ್ ಜಲಾಶಯದಿಂದ ಸಾವಿರಾರು ಕ್ಯೂ ಸೆಕ್ಸ ನೀರನ್ನು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಗೋಕಾಕ ಪಟ್ಟಣಕ್ಕೆ ನೀರು ನುಗ್ಗಿದೆ ಇದರ ಪರಿಣಾಮ ಪಟ್ಟಣದ ಡೋರಗಲ್ಲಿ, ಮಟಣ ಮಾರ್ಕೇಟ್,ಕಲಾಲ ಗಲ್ಲಿ, ಉಪ್ಪಾರ ಗಲ್ಲಿ, ಬೊಜಗಾರ ಗಲ್ಲಿ, ಕುಂಬಾರ ಗಲ್ಲಿ, ಲಕ್ಕಡ ಗಲ್ಲಿ, ವಡ್ಡರ ಗಲ್ಲಿ, ಕೋಳಿ ಕಾಟಾ, ದಾಲಂಬರಿ ತೋಟ, ಗಣೇಶ ನಗರ, ಹಾಳಬಾಗ ಗಲ್ಲಿ, ಆಚಾರಗಲ್ಲಿ, ಅವಟಿ ಗಲ್ಲಿ, ಕಿಲ್ಲಾ, ನಾಕಾ ನಂ-1,  ಪೀಶ್ ಮಾರ್ಕೇಟ್ ಪ್ರಹಾಪ್ರಸಾಧಿ ಕಕ್ಕಯ್ಯಾ ಶಾಲೆ ಜಲಾವೃತಗೊಂಡು ಶಾಲೆಯ ಮೂಲ ದಾಖಲಾತಿಗಳು, 2 ಕಂಪೂಟರ್, 1 ಲ್ಯಾಪ್ ಟಾಪ್, ಪ್ರೀಂಟರ್,  ಝರಾಷ ಮೀಸನ್, ಶಾಲೆಗೆ ಅಳವಡಿಸಲಾದ ಸಿಸಿ ಕ್ಯಾಮರಾ, ಮಕ್ಕಳಿಗೆಂದು ಓದಲಿಕ್ಕಾಗಿ ಲ್ಯಾಬರಿ ನೀರ್ಮಿಸಲಾಗಿತ್ತು ಅದರಲ್ಲಿರುವ ಸಂಪೂರ್ಣ ಪುಸ್ತಕಗಳು, ಮಕ್ಕಳ ಆಟೋಪಕರಣಗಳು, ಆಟದ ಮೈದಾನದಲ್ಲಿ ಅಳವಡಿಸಲಾದ ಶಾಲೆಯ ಪಿಠೋಪರಣಗಳು, ಡೇಸ್ಕಗಳು, ಮಕ್ಕಳ ಶಾಲಾ ಸಮವಸ್ತ್ರ, ಮತ್ತು ವಿಜ್ಞಾನ ಅಧ್ಯಯನಕ್ಕಾಗಿ ಬಳಸುವ ವಸ್ತುಗಳು ನಿರಂತರ 7 ರಿಂದ 8 ದಿನಗಳ ಕಾಲ ನೀರಿನಿಂದ ಶಾಲೆಯು ಮೂಲಗಡೆ ಯಾಗಿದ್ದು ಬಾಗಿಲುಗಳು ಕೋಲೆತು ಮುರಿದು ಶಾಲೆಗೆ ಸಂಬದಿಸಿದ ವಸ್ತುಗಳು ನೀರು ಪಾಲಾಗಿದೆ ಶಾಲೆಯ ಕಟ್ಟಡ ಸಂಪೂರ್ಣ ದುರಸ್ತಿ ಹಂತಕ್ಕೆ ತಲುಪಿದೆ.
ಶಾಲೆಯ ಪಕ್ಕದಲ್ಲಿದ್ದ ಸರಕಾರದ ಮಾನ್ಯತೆ ಪಡೆದ ನ್ಯಾಯ ಬೆಲೆ ಅಂಗಡಿ ಎಂ.ಬಿ.ಮಾವರಕರ ರವರ ಅಂಗಡಿಯಾಗಿದ್ದು ನಂ: 191 ಇದ್ದು ಸದರಿ ಮಾಲಿಕರ ಗೋಲು ನೀರು ಪಾಲಾಗಿದೆ ಅಂಗಡಿಯಲ್ಲಿದ ಡಿಜಿಟಲ್ ತೂಕದ ಯಂತ್ರ, ಸೀಲ್‍ಕಿದ್ದ 14 ಕ್ಟೀಲ್ 80 ಕೆ.ಜಿ ಅಕ್ಕಿ, 800 ಖಾಲಿ ಚಿಲಗಳು, ಡಿಜಿಟಲ್ ಬಯೋಮೇಟ್ಟರಿಕ್ ಯಂತ್ರ, 1 ಕಂಪೂಟರ್ ಸೇಟ್, ನ್ಯಾಯ ಬೆಲೆ ಅಂಗಡಿಯ ಮೂಲ ದಾಖಲೆಗಳು, ನೀರು ಪಾಲಾಗಿದೆ.
ಗೋಕಾಕ ಆದಿಜಾಂಬವ ನಗರದಲ್ಲಿ ಮನೆಗಳು ಕೂಡ ಬಿದ್ದಿವೆ ಇದರಿಂದ ಇಲ್ಲಿನ ಜನರು ಪರದಾಡುವ ಪರಿಸ್ಥಿತಿ ಬಂದಿದೆ, ಅದಲ್ಲದೆ ಗೋಕಾಕದಿಂದ ಘಟಪ್ರಭಾ ಕಡೆಗೆ ಹೋಗುವ ಲೋಳಸೂರ ಸೇತುವೆ, ಕೊಣ್ಣೂರ, ಪಾಲ್ಸ ಕಡೆಗೆ ಹೋಗುವ ಮಾರ್ಕಂಡೆಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಪೋಲಿಸ ಇಲಾಖೆಯವರು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ, ಘಟಪ್ರಭಾ ನದಿಯಿಂದ ರಬಸದಿಂದ ಹರಿದು ಬರುತ್ತಿರುವ ನೀರಿಗೆ ಕೊಣ್ಣೂರ ಪಟ್ಟಣದಲ್ಲಿ ನೀರಿನಲ್ಲಿ ಸಿಲುಕಿರುವ ಜಾನುವಾರವನ್ನು ಇಲ್ಲಿನ ಸಾರ್ವಜನಿಕರು ಕ್ರೇನ್ ಮುಖಾಂತರ ಮೇಲಕ್ಕೆತ್ತಿ ಜಾನುವಾರಿನ ಪ್ರಾಣ ಉಳಿಸಿದ್ದಾರೆ.
ಈ ಮೇಲಿನ ನಗರದ ಗಲ್ಲಿ ಗಳಲ್ಲಿ ಸಂಪೂರ್ಣ ಮನೆಗಳು, ಅಂಗಡಿಗಳು ಮೂಲ ದಾಖಲೆಗಳು ಶಾಲೆ ಕಾಲೇಜು ದಾಖಲೆಗಳು ಒಡವೆ ವಸ್ತ್ರಗಳು ದಿನ ಬಳಕೆ ಬಳಸುವ ಸಾಮಗ್ರಿಗಳು ಮನೆಗಳು ಬಿದ್ದು ಕೈಗುಸಿಗದೆ ಜನರು ಪರದಾಡುವಂತಾಗಿದೆ ಸ್ತಿತ್ಥಿ ನಿರ್ಮಾಣವಾಗಿದೆ.    .

Leave a Comment