ಗೋಏರ್ ವಿಮಾನ ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ

 

ನವದೆಹಲಿ,ಸೆ.೩- ಬೆಂಗಳೂರಿನಿಂದ ಪುಣೆಗೆ ಹೋಗಬೇಕಿದ್ದ ಗೋಏರ್ ಎ೩೨೦ ವಿಮಾನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ವಿಮಾನ ಟೇಕ್ ಆಫ್ ನಂತರ ಪುನಃ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ವಿಮಾನದಲ್ಲಿ ಒಟ್ಟು ೧೬೯ ಪ್ರಯಾಣೀಕರು ಇದ್ದು, ಎಲ್ಲರಿಗೂ ಬೇರೆ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಗೋಏರ್ ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನ ಹಾರಾಟ ಆರಂಭಿಸಿದ ನಂತರ ವಿಮಾನದ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಕೂಡಲೇ ವಿಮಾನದ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಗೋಏರ್ ವಕ್ತಾರ ತಿಳಿಸಿದ್ದಾರೆ.
ವಿಮಾನ ಟೇಕ್‌ಆಫ್‌ಗೊಂಡ ಕೆಲವು ಸಮಯದ ನಂತರ ಎಂಜಿನ್‌ನಲ್ಲಿ ಕಂಪನ ಉಂಟಾಗುತ್ತಿದ್ದು, ಆಯಿಲ್ ಚಿಪ್ ಡಿಟೆಕ್ಷನ್ ಅಲರಾಂ ಎಚ್ಚರಿಕೆ ನೀಡಿದೆ. ಕೂಡಲೇ ವಿಮಾನದ ತುರ್ತು ಭೂಸ್ಪ್ಪರ್ಶ ಮಾಡುವಂತೆ ಪೈಲಟ್‌ಗೆ ಸಂದೇಶ ರವಾನಿಸಲಾಗಿತ್ತು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

Leave a Comment