ಗೊಳೋ ಎನ್ನುತ್ತಿದ್ದಾರೆ ನಾರಾಯಣ ಗೌಡ

 

ಬೆಂಗಳೂರು, ಫೆ೧೨- ಜೆಡಿಎಸ್ ಶಾಸಕ ನಾರಾಯಣ ಗೌಡರನ್ನು ಬಿಜೆಪಿ ನಾಯಕರು ಮುಂಬೈ ಹೋಟೆಲ್ ನಲ್ಲಿ ಕೂಡಿಟ್ಟುಕೊಂಡಿದ್ದು, ಅವರು ಹೊರ ಬರಲಾರದೆ ಗೊಳೋ ಎನ್ನುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಈ ಕುರಿತ ಮಾಹಿತಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಇದ್ದು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ನಾರಾಯಣ ಗೌಡ, ಆಡಿಯೋ ಟೇಪ್ ಬಹಿರಂಗಗೊಂಡ ಬಳಿಕ ನಡೆದಿರುವ ರಾಜಕೀಯ ವಿದ್ಯಮಾನಗಳಿಂದಾಗಿ ವಾಪಾಸ್ ಮರಳಲು ಬಯಸಿದ್ದಾರೆಂದು ಹೇಳಲಾಗುತ್ತಿದ್ದು, ಆದರೆ ಜೊತೆಯಿರುವವರು ಬಿಡುತ್ತಿಲ್ಲವೆನ್ನಲಾಗಿದೆ. ಹೀಗಾಗಿಯೇ ತಮ್ಮ ಆಪ್ತರಿಗೆ ಕರೆ ಮಾಡಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

Leave a Comment