ಗೊಂಬೆಗಳ ಲವ್‌ನಂತೆ ದಾದಾನದೂ ಕಣ್ಣೀರ ಕ್ಲೈಮ್ಯಾಕ್ಸ್

ದಾದಾ ಈಜ್ ಬ್ಯಾಕ್ ಎಂದಾಕ್ಷಣ ಈ ಚಿತ್ರಕ್ಕೂ ವಿಷ್ಣುವರ್ಧನ್‌ಗೂ ಸಂಬಂಧವಿದೆಯಾ? ಈ ಕುತೂಹಲ ಇತ್ತು. ಆದರೆ ಈ ಚಿತ್ರಕ್ಕೂ ವಿಷ್ಣು ಸರ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ದೇಶಕ ಸಂತೋಷ್ ಹೇಳಿಕೊಂಡೇ ಬಂದಿದ್ದಾರೆ. ಅವರು ಪ್ರಕಾರ ಶೀರ್ಷಿಕೆ ಜನರನ್ನು ಹಿಡಿದಿಡುತ್ತೆ ಎನ್ನುವ ಕಾರಣಕ್ಕಾಗಿ ಈ ಹೆಸರಿಟ್ಟಿದ್ದಾರಂತೆ.

ಚಿತ್ರ ಶುರುವಾಗಿ ವರ್ಷಕ್ಕಿಂತ ಹೆಚ್ಚು ಸಮಯವೇ ಆಗಿದೆ ಈಗ ತೆರೆಗೆ ತರಲು ಸಿದ್ಧತೆ ನಡೆಸಿರುವ ಬಗ್ಗೆ ತಿಳಿಸಲು ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ತಮ್ಮ ಗೊಂಬೆಗಳ ಲವ್ ಚಿತ್ರದ ಕ್ಲೈಮ್ಯಾಕ್ಸ್ ದಾದಾ ಚಿತ್ರದಲ್ಲಿಯೂ ಸಿಗುತ್ತದೆ ಮೂರು ಟ್ರ್ಯಾಕ್‌ನಲ್ಲಿ ಕಥೆ ನಡೆಯುತ್ತದೆ.

ಕೌಟುಂಬಿಕ ಬಾಂಧವ್ಯವನ್ನು ಇಟ್ಟು ಮಾಡಿರುವ ಕಥೆಯಲ್ಲಿ  ಗ್ಯಾಂಗ್‌ವಾರ್‌ನ ಮುಖ್ಯವಾಗಿ ಇಟ್ಟುಕೊಳ್ಳಲಾಗಿದೆ ಎನ್ನುವ ವಿವರಣೆಯನ್ನು ನೀಡಿದರು. ಅಲ್ಲದೆ ತುಂಬಾ ದಿನದಿಂದ ಕನ್ನಡದಲ್ಲಿ ನಟಿಸಬೇಕೆಂದು ಕಾಯುತ್ತಿದ್ದ ತಮಿಳಿನ ಹೆಸರಾಂತ ಕಲಾವಿದ ಪಾರ್ಥಿಬನ್ ಆಸೆ ದಾದಾದಿಂದ ಈಡೇರಿದೆ ಎಂದು ಹೇಳಿಕೊಂಡರು.

ಗೊಂಬೆಗಳ ಲವ್ ಚಿತ್ರದಲ್ಲಿದ್ದ ತಂಡವೇ ಬಹುತೇಕ ಕೆಲಸ ಮಾಡಿದೆ, ಈ ಚಿತ್ರದಲ್ಲೂ ನಾಯಕರಾಗಿರುವ ಅರುಣ್ ಗೊಂಬೆಗಳ ಲವ್ ಚಿತ್ರದಲ್ಲಿದ್ದಂತೆ ದಾದಾನ ಕ್ಲೈಮ್ಯಾಕ್ಸ್ ಕೂಡ ಭಾವುಕವಾಗಿ ಮಿಡಿಯುವಂತೆ ಮಾಡಿ ಕಣ್ಣೀರು ತರಿಸುತ್ತದೆ ಎನ್ನುವ ವಿಶ್ವಾಸದಲ್ಲಿದ್ದರೆ, ಈ ಚಿತ್ರದಿಂದ ಮೊದಲ ಬಾರಿಗೆ ಮತ್ತೊಬ್ಬ ನಾಯಕರಾಗುತ್ತಿರುವ ಅಜಯ್ ಇಂಥ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ನಾಯಕಿ ಶ್ರಾವ್ಯ ನನ್ನದು ಮಧ್ಯಮ ವರ್ಗ ಕುಟುಂಬದ ಗಾರ್ಮೇಂಟ್ಸ್ ಕೆಲಸಕ್ಕೆ ಹೋಗುವ ಹುಡುಗಿಯ ಪಾತ್ರ. ಈ ಚಿತ್ರತಂಡದ ಜೊತೆ ಕೆಲಸ ಮಾಡಿರುವುದು ಸಂತೋಷ ಕೊಟ್ಟಿದೆ ಎಂದರು.

ನಿರ್ಮಾಪಕ ಶಂಕರ್ ಚಿತ್ರಕ್ಕೆ ಅಂದಾಜು ಮಾಡಲಾಗಿದ್ದ ಬಜೆಟ್‌ನಲ್ಲಿ ಶೇ. ೨೫ರಷ್ಟನ್ನು ಸಂತೋಷ್ ಉಳಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಾದಾ ಚಿತ್ರ ಮಾಡಿರುವುದಕ್ಕೆ ಅವರಲ್ಲಿ ತೃಪ್ತಿ ಇತ್ತು.

ಹಾಗೇನೇ ಹಿರಿಯ ಕಲಾವಿದರಾದ ದತ್ತಣ್ಣ ಅವರ ಈ ಮಾತುಗಳು ದಾದಾನ ಸ್ವರೂಪವನ್ನು ಬಿಚ್ಚಿಟ್ಟಿತು “ಸಂತೋಷ್ ವಯಸ್ಸಿನಲ್ಲಿ ಕಿರಿಯ ಆದರೆ ತುಂಬಾ ಹಿರಿಯ ಆಲೋಚನೆಗಳನ್ನು ಇಟ್ಟುಕೊಂಡು ಚಿತ್ರ ಮಾಡಬಲ್ಲ ವ್ಯಕ್ತಿ. ಅವರು ಮಾನವೀಯ ಸಂಬಂಧಗಳನ್ನು ಎತ್ತಿಹಿಡಿದು ದಾದಾನ ಕಥೆಯನ್ನು ಸಮರ್ಪಕವಾಗಿ ಮಾಡಿದ್ದಾರೆ ನನಗೆ ಇಷ್ಟವಾಯಿತು. ಚಿತ್ರಕ್ಕೆ ಶುಭವಾಗಲಿ”

Leave a Comment