ಗೆಲುವಿನ ಗುರಿಯೊಂದಿಗೆ ಅಂಗಳಕ್ಕೆ ಇಳಿದಿದ್ದೇವು: ರೋಹಿತ್

ರಾಜ್ ಕೋಟ್, ನ.8 – ಬಾಂಗ್ಲಾದೇಶ ವಿರುದ್ಧದ ಮಹತ್ವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಪರಿಸ್ಥಿತಿಗಳ ಲಾಭವನ್ನು ಪಡೆದುಕೊಳ್ಳುವುದು ಮತ್ತು ಗೆಲ್ಲುವುದೇ ನಮ್ಮ ಗುರಿಯಾಗಿತ್ತು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಮೊದಲ ಟಿ -20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು. ಆದರೆ ಎರಡನೇ ಪಂದ್ಯ ಗೆಲ್ಲುವ ಮೂಲಕ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮನಾಗಿಸಿದೆ. ರೋಹಿತ್ ಅವರ ವೃತ್ತಿಜೀವನದ 100 ನೇ ಟಿ -20 ಪಂದ್ಯವಾಗಿತ್ತು.

“ವಾಷಿಂಗ್ಟನ್ ಸುಂದರ್ ಮತ್ತು ಚಹಾಲ್ ಇಬ್ಬರೂ ಉತ್ತಮ ಬೌಲಿಂಗ್ ನಡೆಸಿದರು. ಕಳೆದ ಪಂದ್ಯದಲ್ಲಿನ ಕಹಿಯನ್ನು ಮರೆತು ಆಡಿದ್ದೇವೆ. ಚಹಾಲ್ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಬೌಲ್ ಮಾಡಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ” ಎಂದು ರೋಹಿತ್ ತಿಳಿಸಿದ್ದಾರೆ.

“ನಾವು ಅನೇಕ ತಪ್ಪುಗಳನ್ನು ಮಾಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ಸಂಪೂರ್ಣ ಗಮನವು ಪಂದ್ಯವನ್ನು ಗೆಲ್ಲುವತ್ತ ಇತ್ತು. ರಾಜ್‌ಕೋಟ್‌ನ ಟ್ರ್ಯಾಕ್ ತುಂಬಾ ಚೆನ್ನಾಗಿದೆ ಎಂದು ನಮಗೆ ತಿಳಿದಿತ್ತು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ತೊಂದರೆ ಉಂಟಾಗುತ್ತದೆ ಎಂದು ನಮಗೆ ತಿಳಿದಿತ್ತು. ನಾವು ಅದರ ಲಾಭವನ್ನು ಪಡೆದುಕೊಂಡಿದ್ದೇವೆ ಮತ್ತು ಪವರ್‌ಪ್ಲೇನಲ್ಲಿಯೂ ಉತ್ತಮವಾಗಿ ಆಡಿದ್ದೇವೆ ” ಎಂದಿದ್ದಾರೆ.

Leave a Comment