ಗೆದ್ದು ಬಾ ಇಂಡಿಯಾ: ವಿಶೇಷ ಪೂಜೆ

ರಾಯಚೂರು.ಜೂ.16- ಇಂಡಿಯಾ, ಪಾಕಿಸ್ತಾನ ಕ್ರೀಕೆಟ್ ಪಂದ್ಯದಲ್ಲಿ ಇಂಡಿಯಾ ಜಯ ಸಾಧಿಸಲೆಂದು ಕ್ರಿಕೇಟ್ ಅಭಿಮಾನಿಗಳಿಂದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದರು.
ಇಂದು ಮಧ್ಯಾಹ್ನದಿಂದ ಪ್ರಾರಂಭವಾಗುವ ಕ್ರಿಕೇಟ್‌ ವಲ್ಡ್ ಕಪ್ ಪಂದ್ಯಾವಳಿಯಲ್ಲಿ ಸಂಪ್ರಾದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ರೋಚಕ ಪಂದ್ಯಾವಳಿಯಲ್ಲಿ ಭಾರತ ತಂಡ ಅಧಿಕ ರನ್‌ಗಳ ಅಂತರದಿಂದ ಗೆಲವು ಸಾಧಿಸಲೆಂದು ವಿಶೇಷ ಪೂಜೆ ಕೈಂ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪ್ರಾರ್ಥಿಸಿದರು.
ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬಂಗಿ ಮುನಿರೆಡ್ಡಿ, ಜೆ.ಎಂ.ಮೌನೇಶ, ಬಿ.ಶಿವಾರೆಡ್ಡಿ, ಗಂಜಿ ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು. ಮಹಾತ್ಮಾಗಾಂಧಿ ವೃತ್ತದಲ್ಲಿರುವ ಆಂಜಿನೇಯ ದೇವಸ್ಥಾನದಲ್ಲಿ ಸಂಜೀವಿನಿ ವಾಕಿಂಗ್ ಕ್ಲಬ್ ವತಿಯಿಂದಲೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಜೀವಿನಿ ವಾಕಿಂಗ್ ಕ್ಲಬ್ ಅಧ್ಯಕ್ಷರಾದ ಯು.ಆಂಜಿನೇಯ, ಚಂದ್ರಕಾಂತ ಮನವಳ್ಳಿ, ಎಲ್.ಜಿ.ಶಿವಕುಮಾರ, ಲಕ್ಷ್ಮಿಪತಿ, ಬಸವರಾಜ ಅಚ್ಚೊಳ್ಳಿ, ಕೆ.ಖಂಡೆಪ್ಪ, ಎನ್.ಸುರೇಶ, ಮುನ್ನಾ ಇನ್ನಿತರರು ಉಪಸ್ಥಿತರಿದ್ದರು.

Leave a Comment