ಗೃಹಿಣಿ ನೇಣಿಗೆ ಶರಣು

ಮೈಸೂರು, ಜುಲೈ 11 – ಗೃಹಿಣಿಯೋರ್ವಳು ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಬನ್ನೂರು ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಚೈತ್ರಾ (24) ಮೃತ ದುರ್ದೈವಿ. ಕಳೆದ ರಾತ್ರಿ ಚೈತ್ರಾಳ ಮೃತದೇಹ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಇದು ಆತ್ಮಹತ್ಯೆ ಅಲ್ಲ ಕೊಲೆ. ವರದಕ್ಷಿಣೆಗಾಗಿ ತಮ್ಮ ಮಗಳಿಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ ಚೈತ್ರಾ ಕುಟುಂಬಸ್ಥರು ಬನ್ನೂರು ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

8 ವರ್ಷದ ಹಿಂದೆ ಬನ್ನೂರಿನ ಸಿದ್ಧರಾಜು ಹಾಗೂ ಚೈತ್ರಾಳಿಗೆ ವಿವಾಹವಾಗಿತ್ತು. ವರದಕ್ಷಿಣೆಗಾಗಿ 1ವರ್ಷದಿಂದ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರೆಂದು ಆಕೆಯ ಪೋಷಕರು ಆರೋಪಿಸಿದ್ದಾರೆ.  ಕೆ.ಆರ್ ಆಸ್ಪತ್ರೆಯಲ್ಲಿ ಚೈತ್ರಾ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಆಕೆಯ ಪೋಷಕರಿಗೆ ಶವ ಹಸ್ತಾಂತರಿಸಲಿದ್ದಾರೆ

 

Leave a Comment