ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ

ಓರ್ವ ಸಾವು ; ಹಲವರಿಗೆ ಗಾಯ
ಮೈಸೂರು. ಸೆ.9: ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇತರ ಹಲವು ಮಂದಿ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕಂಚಮಳ್ಳಿ ಬಳಿ ನಡೆದಿದೆ.
ಮೈಸೂರು ಕಡೆಯಿಂದ ಕೇರಳ ರಾಜ್ಯಕ್ಕೆ ತರಕಾರಿ ಸಾಗಿಸುತ್ತಿದ್ದ ಮಿನಿ ಬುಲೇರೋ ಗೂಡ್ಸ್ ವಾಹನ ಇದಾಗಿದ್ದು, ಮರದ ನಡುವೆ ಸಿಲುಕಿಕೊಂಡ ವಾಹನದೊಳಗಿನಿಂದ‌ ಮೃತ ದೇಹ‌ ಸೇರಿದಂತೆ ಮೂರು ಮಂದಿ ಗಾಯಾಳುಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಡುತ್ತಿದ್ದಾರೆ. ಕಟ್ಟರ್ ನಿಂದ ಕಟ್ ಮಾಡಿ ವಾಹನ ಹೊರ ತೆಗೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ದೌಡಾಯಿಸಿದ್ದು, ಮಿತಿಮೀರಿ ಮದ್ಯ ಸೇವಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

Leave a Comment