ಗೂಡಂಗಡಿಗಳ ತೆರವಿಗೆ ವ್ಯಾಪಾರಸ್ಥರ‌ ಅಕ್ರೋಶ

ಬಾಗಲಕೋಟೆ ಮೇ ೩೧ – ಅನಧಿಕೃತ ಗೂಡಂಗಡಿಗಳು ಎಂದು  ಜೆಸಿಬಿಯಿಂದ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ ಘಟನೆ  ನಗರದಲ್ಲಿ ನಡೆದಿದೆ.
ಈ ಮೂಲಕ ಕೊರೊನಾ ಸಂಕಷ್ಟದ ನಡುವೆ ನಗರಸಭೆ ಅಧಿಕಾರಿಗಳು ಬಡವರ ಹೊಟ್ಟೆಗೆ ಕಲ್ಲಾಕಿದಂತಾಗಿದ್ದು, ಬಡ ಗೂಡಂಗಡಿ ವ್ಯಾಪಾರಿಗಳಿಗೆ ಈಗ ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆದಂತಾಗಿದೆ
ಬೆಳ್ಳಂ ಬೆಳಗ್ಗೆ ಬಾಗಲಕೋಟೆ ಸಿಮೆಂಟ್ ಪ್ಯಾಕ್ಟರಿ ವೃತ್ತದ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಗರದ ವಿವಿಧೆಡೆ ಇದ್ದ ಸ್ಟೇಶನರಿ ಅಂಗಡಿ, ಜ್ಯೂಸ್ ಅಂಗಡಿ, ಕಬ್ಬಿನ ರಸ ಮಾಡುವ ಯಂತ್ರದ ಬಂಡಿ ಜೆಸಿಬಿ ಮೂಲಕ ಕಾರ್ಯಾಚರಣೆ ದ್ವಂಸ ಮಾಡಿದ್ದು,  ಇದ್ರಿಂದ ಲಕ್ಷಾಂತರ ರೂ. ಬೆಲೆಯ ವಸ್ತುಗಳ ಸಮೇತ ಗೂಡಂಗಡಿಗಳು ಮಣ್ಣುಪಾಲಾಗಿವೆ.
ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದು,  ಸ್ವಂತ ಜಮೀನಿನಲ್ಲಿ ಇಟ್ಟುಕೊಂಡಿದ್ರೂ ಕಾರ್ಯಾಚರಣೆ ಮಾಡಲಾಗಿದ್ದು ಖಂಡನೀಯ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೂಡಂಗಡಿ ಇಟ್ಟಿದ್ದಕ್ಕೆ ನಿತ್ಯ ಭೂಬಾಡಿಗೆ ಕಟ್ಟಿದ್ದೇವೆ. ಹಾಗಾಗಿ ಕಾರ್ಯಾಚರಣೆ ಮಾಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದರು.

Share

Leave a Comment