ಗುಲ್ಬರ್ಗಾ : ಪ್ರತಿಜ್ಞಾ ದಿನ ಸಭೆ

ರಾಯಚೂರು.ಜೂ.30- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅವರ ಪದಗ್ರಹಣ ಮತ್ತು ಪ್ರತಿಜ್ಞಾ ದಿನ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಗುಲ್ಬರ್ಗಾದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನಿರ್ವಹಿಸಲಾಯಿತು. ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಎ.ವಸಂತಕುಮಾರ ಅವರು ಈ ಸಭೆಯನ್ನು ನಡೆಸಿದರು. ಪಕ್ಷದ ಎಲ್ಲಾ ಕೋಆರ್ಡಿನೇಟರ ಸಭೆಯಲ್ಲಿ ಅಂತರ್ಜಾಲ ಮತ್ತು ನೇರ ಪ್ರಸಾರದ ಮೂಲಕ ಹೆಚ್ಚಿನ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಪದಗ್ರಹಣ ಸಮಾರಂಭ ಮತ್ತು ಪ್ರತಿಜ್ಞಾ ದಿನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ವಹಿಸಿಕೊಟ್ಟ ಜವಾಬ್ದಾರಿಯಂತೆ ಆಯಾ ಭಾಗಗಳಲ್ಲಿ ಜನರು ಪ್ರತಿಜ್ಞಾ ದಿನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸೂಚನೆ ನೀಡಲಾಯಿತು.

Share

Leave a Comment