ಗುರು ಪರಂಪರೆ ಭಾರತೀಯ ಸಂಸ್ಕøತಿಯ ತಿರುಳು-ಡಾ.ಅಜಿತ ಪ್ರಸಾದ

ಧಾರವಾಡ ಜು.18-ಇತ್ತಿಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧಗಳು ಕದಡಿ ಹೋಗುತ್ತಿದ್ದು ಆಧುನಿಕ ಯುಗದಲ್ಲಿ ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯವಾಗಿದೆ. ಆದರೆ ವಿದ್ಯಾಥಿಗಳಿಗೆ ತಾಳ್ಮೆ, ಸಹನೆ, ಭಕ್ತಿ ಗೌರವ ಇವುಗಳನ್ನು ಪಡೆಯಲು ಸಾದ್ಯವಾಗುತ್ತಿಲ್ಲ ಕೇವಲ ಗುರುಕುಲದಲ್ಲಿ ಕಲಿತ ಹಲವಾರು ವಿದ್ವಾನರು ನಮಗೆ ಗೋಚರಿಸುತ್ತಾರೆ ಆದರೆ ಬೆರಲ ತುದಿಯಲ್ಲಿಯೇ ಸಮಗ್ರ ಜ್ಞಾನದ ಕಣಜವಿದ್ದರೂ ಆತಂಕವಾದ ಮಾದಕ ವಸ್ತುಗಳ ಸೇವನೆ ಮುಂತಾದವುಗಳು ಮಿತಿ ಮೀರಿ ನಡೆಯುತ್ತಿರುವದಕ್ಕೆ ಗುರುಗಳ ಮಾರ್ಗದರ್ಶನವಿಲ್ಲದಿರುವುದೇ ಕಾರಣ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಆಯೋಜಿಸಿದ್ದ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯ ವಿವಿಧ ಮಜಲುಗಳ ಸನ್ನಿವೇಶಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಗುರುವೇಂದರೆ ಕೇವಲ ಪಾಠ ಹೇಳುವ ಯಂತ್ರವಲ್ಲ ಜೀವನವನ್ನು ರೂಪಗೊಳಿಸುವ ಚೇತನ ಶಕ್ತಿ ಎಂದು ಹೇಳಿದರು.
ಆಶ್ರಮ, ಯಜ್ಞಕುಂಡ, ಪಾಠಶಾಲೆ, ಉದ್ಯಾನವನ, ನೀರಿನ ಹೊಂಡ ನೋಡುಗರ ಕಣ್ಮನ ಸೆಳೆಯುವಂತಿದ್ದವು. ಇದೇ ಸಂದರ್ಭದಲ್ಲಿ ಶಾಲೆಯವತಿಯಿಂದ ಡಾ. ಅಜಿತ ಪ್ರಸಾದರವರನ್ನು ಪ್ರಾಚಾರ್ಯರಾದ ಶ್ರೀಮತಿ ಸಾಧನಾ ಸನ್ಮಾನಿಸಿದರು. ಮಹಾವೀರ ಉಪಾದ್ಯೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment