ಗುರು ಗ್ರಹದಲ್ಲಿ ನೀರು

ಉತ್ತನೂರು ವೆಂಕಟೇಶ್

ಸೌರಮಂಡಲ ಮತ್ತು ಅದರ ಆಚೆಗಿನ ಗ್ರಹಗಳ ಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಪ್ರತಿಭಾರಿಯೂ ಹೊಸ ಹೊಸ ಅಂಶಗಳು ಪತ್ತೆಯಾಗುತ್ತಿರುವುದನ್ನು ಗಮನಿಸಿದರೆ ಬ್ರಹ್ಮಾಂಡದಲ್ಲಿ ಏನೆಲ್ಲ ಇರಬಹುದು ಎಂಬ ಕುತೂಹಲ ಮೂಡುತ್ತದೆ. ಹಾಗೆಯೇ ಅದರ ನಿಗೂಢತೆ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ ಎಂಬುದಕ್ಕೆ ಇತ್ತೀಚೆಗೆ ಗುರು ಗ್ರಹದಲ್ಲಿ ಯತೇಚ್ಛ ಪ್ರಮಾಣದಲ್ಲಿ ನೀರಿದೆ ಎಂಬ ಹೊಸ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿರುವುದು.

14vichara2

ನಮ್ಮ ಸೌರಮಂಡಲದಲ್ಲಿಯ ಗ್ರಹಗಳ ಶೋಧನೆಯಲ್ಲಿ ಮತ್ತು ಸೌರಮಂಡಲದ ಆಚೆಯ ಗ್ರಹಗಳ ಪತ್ತೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಪ್ರತಿಶೋಧನೆಯಲ್ಲಿಯು ಹೊಸ ಹೊಸ ಅಂಶಗಳು ಪತ್ತೆಯಾಗುತ್ತಿವೆ.

ಈ ಕುತೂಹಲಕಾರಿ ಹೊಸ ಅಂಶಗಳ ಪತ್ತೆ, ಬಾಹ್ಯಾಕಾಶ ಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಲ್ಲಿ ಮತ್ತು ಬಾಹ್ಯಾಕಾಶ ಶೋಧನಾ ಸಂಸ್ಥೆಗಳ ಉತ್ಸಾಹವನ್ನು ಹೆಚ್ಚಿಸಿದೆ.
ಸೌರಮಂಡಲದಲ್ಲಿ ಅತಿ ದೊಡ್ಡ ಗ್ರಹವಾದ ಗುರುಗ್ರಹದಲ್ಲಿ ನೀರು ಇರುವುದು ಇತ್ತೀಚಿನ ನಾಸಾ ಶೋಧನೆಯಲ್ಲಿ ಪತ್ತೆಯಾಗಿದೆ. ಆ ಗ್ರಹದ ವಿಶೇಷತೆಯನ್ನು ಹೆಚ್ಚಿಸಿರುವ ಅದರಲ್ಲಿರುವ ಅತಿ ವಿಶಿಷ್ಟ ರೀತಿಯ ಕೆಂಪು ಮಚ್ಚೆ (ರೆಡ್ ಸ್ಪಾಟ್)ನಲ್ಲಿ ನೀರಿನ ಅಂಶಗಳು ಇರುವುದು ಪತ್ತೆಯಾಗಿದೆ.

ಹಾಗೆಯೇ ಗುರುಗ್ರಹದ ಉಪಗ್ರಹವಾದ ಗ್ಯಾನ ಮೋಡಾದಲ್ಲಿಯೂ ನೀರಿನ ಅಂಶಗಳು ಪತ್ತೆಯಾಗಿದ್ದು, ನೀರಿನ ಅಂಶಗಳಿಂದ ಆವೃತ್ತಗೊಂಡಿರುವ ಈ ಗ್ರಹದಲ್ಲಿ
ಯತೇಚ್ಛ ನೀರನ್ನು ಪಡೆಯಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಈಗಾಗಲೇ ಮಂಗಳ ಗ್ರಹದಲ್ಲಿ ನೀರಿದೆ ಎಂಬ ಅಂಶವನ್ನು ಇಸ್ರೋ ಮತ್ತು ನಾಸಾ ತಮ್ಮ ಶೋಧನೆಗಳಲ್ಲಿ ಪತ್ತೆ ಮಾಡಿದ್ದಾರೆ. ಈಗ ಸೌರವ್ಯೂಹದ ಅತಿ ದೊಡ್ಡ ಗ್ರಹವಾದ ಗುರು ಗ್ರಹದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇದೆ ಎಂಬ ಅಂಶ ಪತ್ತೆ ಆಗಿದೆ.

ಗುರುಗ್ರಹದ ಅಧ್ಯಯನದಲ್ಲಿ ತೊಡಗಿರುವ ನಾಸಾ ವಿಜ್ಞಾನಿಗಳು ಗ್ರಹದ ಕೆಂಪು ಮಚ್ಚೆ. (ರೆಡ್ ಸ್ಟಾಟ್) ಮೋಡದಲ್ಲಿ ಯತೇಚ್ಛ ನೀರಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಗ್ರಹದ ವಿಶೇಷತೆ ಎನ್ನುವಂತಿರುವ ಕೆಂಪು ಮಚ್ಚೆ ತೇವಾಂಶದಿಂದ ಕೂಡಿದ್ದು, ಇದರ ಆಳದಲ್ಲಿ ನೀರಿನ ಅಂಶ ಇದೆ ಎಂದು ಗ್ರಹದ ಶೋಧನೆಯಲ್ಲಿರುವ ಜುನೋ ಬಾಹ್ಯಾಕಾಶ ನೌಕೆ ತೆಗೆದಿರುವ ಛಾಯಾ ಚಿತ್ರಗಳ ಪ್ರಕಾರ ಮತ್ತು ಹಬಲ್ ಟೆಲಿಸ್ಕೋಪ್ ಮೂಲಕ ತಿಳಿದು ಬಂದಿದೆ.

ಗುರುಗ್ರಹ ನಮ್ಮ ಭೂಮಿಗಿಂತ ೧೨೦ ಪಟ್ಟು ಗಾತ್ರದಲ್ಲಿ ದೊಡ್ಡದು. ಸೂರ್ಯನಿಂದ ೫ ನೇ ಗ್ರಹವಾದ ಗುರು ನಮ್ಮ ಸೌರಮಂಡಲದಲ್ಲಿ ಎಲ್ಲ ಗ್ರಹಗಳಿಗಿಂತ ವಿಶಿಷ್ಠವಾದದ್ದು.

ಅನಿಲಗಳಿಂದ ತುಂಬಿರುವ ಈ ಬೃಹತ್ ಗ್ರಹವನ್ನು ಟೆಲಿಸ್ಕೋಪ್ ಸಹಾಯವಿಲ್ಲದೆಯೂ ಕಾಣಬಹುದಾಗಿದೆ. ಇದರಲ್ಲಿರುವ ಅತಿ ದೊಡ್ಡ ಕೆಂಪು ಮಚ್ಚೆ ಅತಿ ಪ್ರಬಲ ಬಿರುಗಾಳಿಯನ್ನೂ ಹೊಂದಿದೆ.

ಈ ಗ್ರಹದಲ್ಲಿಯ ವಿಶೇಷತೆಗಳಿಂದಾಗಿಯೇ ಕಳೆದ ೫ ದಶಕಗಳಲ್ಲಿ ಈ ಗ್ರಹದ ಬಗ್ಗೆ ಅತಿ ಹೆಚ್ಚಿನ ಶೋಧನೆ ನಡೆದಿದೆ. ೧೯೭೨ರ ಮಾರ್ಚ್‌ನಲ್ಲಿ ಪಯೋನಿಯರ್ ಬಾಹ್ಯಾಕಾಶ ನೌಕೆಯಿಂದ ಆರಂಭಿಸಿ ಈಗ ಶೋಧನೆಯಲ್ಲಿರುವ ಜುನೋ ಬಾಹ್ಯಾಕಾಶ ನೌಕೆಯವರೆಗೆ ಶೋಧನೆಯಲ್ಲಿ ತೊಡಗಿರುವ ಶೋಧನಾ ನೌಕೆಗಳು, ಗುರುಗ್ರಹ ಕುರಿತಂತೆ ಅನೇಕ ಅಂಶಗಳನ್ನು ಹೊರಹಾಕಿವೆ. ಗ್ರಹದ ಸಾಂಧ್ರತೆ ಅದರಲ್ಲಿಯ ಅನಿಲಗಳು ಗುರು ಗ್ರಹದ ಉಪಗ್ರಹಗಳು ಅವುಗಳಲ್ಲಿಯ ನೀರಿನ ಅಂಶ ಹಾಗೂ ಗ್ರಹದಲ್ಲಿರುವ ಕೆಂಪು ಮಚ್ಚೆ ಅದರಲ್ಲಿಯ ಬಿರುಗಾಳಿ ಇತ್ಯಾದಿ ಕುರಿತಂತೆ ನಾಸಾ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿವೆ.

ಪಯೋನಿಯರ್ ೧೦, ನಂತರ ೧೯೭೭ರ ಏಪ್ರಿಲ್‌ನಲ್ಲಿ ಪಯೋನಿಯರ್-೧೧, ೧೯೭೭ರ ಸೆಪ್ಟೆಂಬರ್‌ರಲ್ಲಿಯ ವಾಯೇಜರ್-೧ ಮತ್ತು ಅದೇ ವರ್ಷದಲ್ಲಿ ವಾಯೇಜರ್-೨, ೧೯೮೯ರಲ್ಲಿ ಗೇಲಿಯೋ, ೧೯೯೦ರಲ್ಲಿ ಯೂಲಿಸಸ್, ೨೦೦೦ ಡಿಸೆಂಬರ್‌ನಲ್ಲಿ ಕ್ಯಾಸಿನಿ ಹೈಗೆನ್. ೨೦೦೭ರಲ್ಲಿ ನ್ಯೂ ಹೊರೈಜನ್ ಮತ್ತು ೨೦೧೧ರಲ್ಲಿ ಜುನೊ ಬಾಹ್ಯಾಕಾಶ ಶೋಧನಾ ನೌಕೆಗಳು ಗುರುಗ್ರಹದ ಅಧ್ಯಯನ ನಡೆಸಿವೆ.

Leave a Comment