ಗುರುವಿನ ಆದರ್ಶ ಪಾಲಿಸಿ : ಮಧುಸುದನಾಚಾರ್ಯಶ್ರೀ

ಗುಳೇದಗುಡ್ಡ, ಜು 17- ಗುರುವಿನ ಮಹತ್ವ ತಿಳಿಯುವುದು ಬಹಳ ಕಠಿಣವಾದದ್ದು. ದೇವರ ಬಗ್ಗೆ ಒಳ್ಳೆಯ ಜ್ಞಾನ ಕೊಡುವವನೆ ನಿಜವಾದ ಗುರುವಾಗಿದ್ದಾನೆ. ಗುರುವಿನ ಮಾರ್ಗದರ್ಶನದಲ್ಲಿ ಸಾಗಿ ಅವರ ಆದರ್ಶ ತತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಉತ್ತರ ಪ್ರದೇಶದ ಶ್ರೀಅನಂತ ಶ್ರೀವಿಭೂಷಿತ ಮಧುಸುದನಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಬಾಲಾಜಿ ಪಂಚಾಯತ್ ವಾಡಾದಲ್ಲಿ ಸ್ಥಳೀಯ ಮಾರವಾಡಿ ಸಮಾಜದ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ಶ್ರೀಭಗವತ್ ಗೋಷ್ಠಿಯಲ್ಲಿ ಮಾತನಾಡಿ, ಅಂಧಕಾರ ಹೋಗಿಸಿ ಜೀವನದಲ್ಲಿ ಒಳ್ಳೆಯ ಜ್ಞಾನ ಸುಧೆ ಹರಿಸುವವನೆ ಗುರು. ಗುರುವನ್ನು ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಸ್ಮರಿಸಬೇಕು ಎಂದರು.
ಅಂಧಕಾರವನ್ನು ಹೋಗಲಾಡಿಸಿ ಜೀವನದಲ್ಲಿ ಆದರ್ಶತೆ ಬೆಳೆಸಿದ ಗುರುವನ್ನು ಸ್ಮರಿಸಬೇಕು. ಅದು ಗುರುವಿಗೆ ನೀಡುವ ನಿಜವಾದ ಗುರು ದೀಕ್ಷೆಯಾಗಿದೆ. ಬದುಕಿನಲ್ಲಿನ ಅಜ್ಞಾನ, ಕೆಟ್ಟ ವಿಚಾರಗಳನ್ನು ತೆಗೆದು ಜೀವನದಲ್ಲಿ ಉತ್ತಮ ಆಚಾರ ವಿಚಾರಗಳನ್ನು ಮೂಡಿಸಿಕೊಳ್ಳಬೇಕು  ಎಂದು ಶ್ರೀ ಅನಂತ ಶ್ರೀವಿಭೂಷಿತ ಮಧುಸುದನಾಚಾರ್ಯ ಸ್ವಾಮೀಜಿ ಹೇಳಿದರು.
ರಾಜೇಂದ್ರಜೀ ಲಡ್ಡಾ, ಗೋಧಾಜೀ ಕೇತಾನ್, ಗೋಧಂಬಾಜಿ ಬೂಬನಾ, ದೀನದಯಾಳಜೀ ಬೂಬನಾ, ಮಧುಸುದನ ಮುಂದಡಾ, ಕಿಸನಗೋಪಾಲ್ ರಾಠಿ, ಶಂಭು ಷಾ, ಭರತಜಿ ಧರಕ, ಪಂಕಜ್ ಮಾದತ್, ಕಿಸನಗೋಪಾಲಜೀ ಸೋನಿ, ಘನಶ್ಯಾಮ ರಾಠಿ, ಕಮಲಕಿಶೋರ ತಾಪಡಿಯಾ, ಗೋವಿಂದ ಮಾಲಪಾಣಿ, ಘನಶ್ಯಾಮ ಇನಾನಿ, ಮಧುಸುದನ ರಾಠಿ, ನಂದಲಾಲ ಕಾಬ್ರಾ, ಕಮಲ ಮಾಲಪಾಣಿ, ರಾಜು ತಾಪಡಿಯಾ, ಸಂಪತ್ತ ರಾಂದಡ, ಗೋಪಾಲ ಸೋನಿ, ದಾಮೋದರ ಮಾಲಪಾಣಿ, ಗೋಪಾಲ ಭಟ್ಟಡ, ಸಂಪತ್ತ ರಾಠಿ, ಸುರೇಶ ಇನಾನಿ, ಸುರಜ ದರಕ, ಲಕ್ಷ್ಮೀಕಾಂತ ದೂತ, ಮತ್ತಿತರರು ಇದ್ದರು.
ಈ ಭಗವತ್ ಗೋಷ್ಠಿಯಲ್ಲಿ ಸಾಂಗಲಿ, ಸೂರತ್, ನಾಸಿಕ, ಕಲಕತ್ತಾ, ಚಾಲಿಸ್‍ಗಾಂವ್, ಚೆನ್ನೈ, ಮುಂಬಯಿ, ಸೋಲಾಪೂರ, ಇಚಲಕರಂಜಿ, ರಾಯಚೂರ, ಬೆಂಗಳೂರು, ಸಾಲಿಗ್ರಾಮ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಅನೇಕ ಭಕ್ತ ಸಮೂಹ ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Leave a Comment