ಗುರುವಿನ ಅತಿಸಮೀಪದಲ್ಲಿ ಜುನೊ ನೌಕೆ

ಗುರು ಗ್ರಹದ ಶೋಧನೆಯಲ್ಲಿರುವ ನಾಸಾದ ಜುನೊ ಬಾಹ್ಯಾಕಾಶ ನೌಕೆ, ಜುಲೈ 10 ರಂದು ಆ ಗ್ರಹದ ಹೊರಮೇಲ್ಮೈಗೆ ತುಂಬಾ ಹತ್ತಿರದಿಂದ ತೆಗೆದ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ನೂರಾರು ವರ್ಷಗಳಿಂದ ಗುರುಗ್ರಹದ ಮೇಲ್ಮೈಯಲ್ಲಿಯ ಅತಿ ಕುತೂಹಲಕಾರಿಯಾದ ಕೆಂಪು ಆವರಣದ ಅಧ್ಯಯನದ ಮೇಲೆ ಈ ಚಿತ್ರಗಳು ಹೊಸ ಬೆಳಕನ್ನು ಚೆಲ್ಲಲಿವೆ ಎಂದು ಸ್ಯಾನ್ ಆಂಟೋನಿಯಾದಲ್ಲಿರುವ ಸೌತ್ ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಜುನೊ ಯಾನದ ಮುಖ್ಯಸ್ಥ ಸ್ಕಾಟ್ ಬೊಲ್ಟನ್ ಹೇಳಿದ್ದಾರೆ.

ಗುರುಗ್ರಹದ ಶೋಧನೆಯಲ್ಲಿರುವ ನಾಸಾದ ಜುನೊ ಬಾಹ್ಯಾಕಾಶ ನೌಕೆ ಇದೆ ಜುಲೈ 10 ರಂದು ಅದರ ಮೇಲ್ಮೈಯಲ್ಲಿರುವ ಕೆಂಪು ಸ್ಥಳ (ರೆಡ್ ಸ್ಪಾಟ್) ಗೆ ಅತಿ ಸಮೀಪದ ಕಕ್ಷೆಯಿಂದ ಆ ಸ್ಥಳದ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಿದೆ.

ಈ ಚಿತ್ರಗಳು ಗುರುಗ್ರಹದ ಹೊರಮೇಲ್ಮೈ ಮೇಲಿನಲ್ಲಿ ಅನಿಲಗಳಿಂದ ಕೂಡಿರುವ ದಟ್ಟ ಮೋಡಗಳ ಕುರಿತ ಅಧ್ಯಯನದ ಮೇಲೆ ಹೊಸಬೆಳಕು ಮೂಡಿಸಲಿದೆ ಎಂದು ಜುನೊ ಯಾನದ ಮುಖ್ಯಸ್ಥ ಸ್ಕಾಟ್ ಬೊಲ್ಟನ್ ಹೇಳಿದ್ದಾರೆ.

ಜುನೊ ಬಾಹ್ಯಾಕಾಶ ನೌಕೆ ಜುಲೈ 10 ರಂದು ಗುರುಗ್ರಹದ ಮೇಲ್ಮೈಯಲ್ಲಿಯ ಕೆಂಪು ಪ್ರದೇಶಧಿಂದ 2,200 ಮೈಲಿಗಳಷ್ಟು ಸಮೀಪದ ಕಕ್ಷೆಯಲ್ಲಿ ಸುತ್ತುವ ಮೂಲಕ ಆ ಭಾಗದ ಅತ್ಯುತ್ತಮ ಚಿತ್ರಗಳನ್ನು ರವಾನಿಸಿದೆ. ಜುನೊ ನೌಕೆಯ ಕ್ಯಾಮರಾ ಈ ಚಿತ್ರಗಳನ್ನು ತೆಗೆದಿದೆ. ಈ ಚಿತ್ರಗಳ ಜೊತೆಗೆ ನೌಕೆಯಲ್ಲಿರುವ ಇತರೆ 8 ಉಪಗ್ರಹಗಳು ಕಳುಹಿಸಿರುವ ದತ್ತಾಂಶವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗುವುದು ಎಂದ ಸ್ಕಾಟ್ ಬೊಲ್ಟನ್, ಈ ದತ್ತಾಂಶಗಳಿಂದ ಭಾರಿ ಕುತೂಹಲ ಬಿಂದುವಾಗಿರುವ ಆ ಕೆಂಪು ಆವರಣದ ಕುರಿತಂತೆ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ಬಿರುಗಾಳಿ

ಗುರುಗ್ರಹದ ಹೊರಮೇಲ್ಮೈ ದಟ್ಟ ಅನಿಲಗಳಿಂದ ಕೂಡಿರುವ ಮೋಡದ ರೂಪದಲ್ಲಿದ್ದು, ಆ ಭಾಗದಲ್ಲಿಯ ಕೆಂಪು ಪ್ರದೇಶದಿಂದ ನಿರಂತರವಾಗಿ ಅನಿಲಗಳ ಬಿರುಗಾಳಿ ಹೊರಬರುತ್ತಿರುತ್ತದೆ. ಈ ಅನಿಲ ಮೋಡಗಳ ಅಧ್ಯಯನ ಖಗೋಳ ವಿಜ್ಞಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ನಾಸಾ ಇದರ ಅಧ್ಯಯನದಲ್ಲಿ ತೊಡಗಿದೆ.

ಇದರ ಅಧ್ಯಯನಕ್ಕಾಗಿಯೇ 2011 ರಲ್ಲಿ ಜುನೊ ಬಾಹ್ಯಾಕಾಶ ನೌಕೆಯನ್ನು ಗುರುಗ್ರಹದತ್ತ ಕಳುಹಿಸಲಾಗಿದ್ದು, ಜುಲೈ 5, 2011 ರಲ್ಲಿ ಫ್ಲೋರಿಡಾದ ಕೇಪ್ ಕಾನವೆರಾಲ್‌ನಿಂದ ಜಿಗಿದ ಜುನೊ ಬಾಹ್ಯಾಕಾಶ ನೌಕೆ ಗುರುಗ್ರಹದ ಕಕ್ಷೆಯಲ್ಲಿ ಸುತ್ತುತ್ತಿದ್ದು, ಜುಲೈ 10 ರಂದು 6ನೇ ಬಾರಿಗೆ ಗ್ರಹದ ಮೇಲ್ಮೈ ಮೋಡಗಳ ಅತಿ ಸನಿಹ ಕಕ್ಷೆಯಲ್ಲಿ ಹಾದುಹೋಗಿತ್ತು.

ಗುರುಗ್ರಹವನ್ನು ಸೌರಮಂಡಲದ ಅತಿದೊಡ್ಡ ಗ್ರಹ. ಇವರ ವ್ಯಾಸ 142, 800 ಕಿ.ಮೀ ಭೂಮಿಗಿಂತ ಇದು 11 ಪಟ್ಟು ದೊಡ್ಡದು. ಇದರ ಮೇಲ್ಮೈ ಕೆಂಪು ಬಣ್ಣದ ಅನಿಲ ಮೋಡಗಳಿಂದ ಆವೃತವಾಗಿದ್ದು, ಇದರ ಹೆಚ್ಚಿನ ಪಾಲು ಜನಜಲಕ ಮತ್ತು ಹೀಲಿಯಂನಿಂದ ಕೂಡಿದೆ.

– ಉತ್ತನೂರು ವೆಂಕಟೇಶ್

Leave a Comment