ಗುರುಪಾದೇಶ್ವರ ಪಿಯು ಕಾಲೇಜಿನಲ್ಲಿ ವಿಶೇಷ ತರಬೇತಿ

ಕಲಬುರಗಿ,ಮಾ.14- ಹೈದ್ರಾಬಾದ ಕರ್ನಾಟಕ ಪ್ರದೇಶದ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇದೇ ಮಾ.19ರಿಂದ ಮೇ-6 (45 ದಿನಗಳ) ವಿಶೇಷ ತರಬೇತಿಯನ್ನು ಗುರುಪಾದೇಶ್ವರ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಾವಿರಾರು ರೂ.ಮೌಲ್ಯದ ಸಿಇಟಿ, ಎನ್.ಇ.ಇ.ಟಿ (ನೀಟ್) ಪರೀಕ್ಷೆಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವದು ಎಂದು ಗುರುಪಾದೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರೊ.ಎಂ.ಬಿ.ಅಂಬಲಗಿ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

ಪ್ರತಿದಿನ ಬೆಳಿಗ್ಗೆ 6-30ರಿಂದ ಸಂಜೆ 8ರ ವರೆಗೂ ತರಬೇತಿ, ಸಂಜೆ 7ರಿಂದ 9, ಹಾಗೂ ನಸುಕಿನ ಜಾವ 4ರಿಂದ 6ರ ವರೆಗೂ ಉಪನ್ಯಾಸಕರ ಸಮ್ಮುಖದಲ್ಲಿ ಓದು ಮತ್ತು ತರಬೇತಿ ಮಾರ್ಗದರ್ಶನ ನೀಡಲಾಗುವದು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಡಿಮೆ ದರಲ್ಲಿ ಊಟ, ವಸತಿ, ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ, ಅಗ್ರಿಕಲ್ಚರ ಕೋರ್ಸುಗಳಿಗೆ ಪ್ರಾಯೋಗಿದಕ ತರಬೇತಿ, 60 ಮಾದರಿ ಪರೀಕ್ಷೆಗಳಿಗೆ ತಗಲುವ ಶುಲ್ಕ ಒಂದು ಸಾವಿರ ಮಾತ್ರ. ಪಿಯುಸಿ ಪ್ರಥಮ ವರ್ಷದ ಸಲೆಬಸ್ ಮಾ.19ರಿಂದ 27ರ ವರೆಗೂ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9880169907 ಮತ್ತು 9590903555 ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ಹೇಳಿದರು.

Leave a Comment