ಗುರುತು ಮರೆಮಾಚಿ ಸಲೂನ್‌ನಲ್ಲಿ ಕೆಲಸ ಮಾಡುವ ಸಹೋದರಿಯರು

ವಿಶ್ವ ಆಧುನಿಕತೆಯತ್ತ ಸಾಗುತ್ತಿದ್ದಂತೆ ಮಹಿಳೆಯರು ಪ್ರತಿಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದ್ದಾರೆ. ಆದರೆ ಕೆಲವೊಂದು ಕ್ಷೇತ್ರದಲ್ಲಿ ಅವರು ಉದ್ಯೋಗ್ಯಸ್ಥರಾಗುವುದು ಕನಸಿನ ಮಾತು. ಆದರೂ ಅನಿವಾಱ್ಯವಾಗಿ ಅಂತಹ ಉದ್ಯೋಗವನ್ನು ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಈಗಲೂ ಪುರುಷ ಪ್ರಧಾನ ಸಮಾಜವೇ ತನ್ನ ಅದಿಪತ್ಯವನ್ನು ಸ್ಥಾಪಿಸಿದೆ. ಇದರ ನಡುವೆಯೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಮಾಡುವ ಮೂಲಕ ಪುರುಷರಷ್ಟೇ ಸರಿಸಮಾನರಾಗಿ ನಿಂತಿದ್ದಾರೆ.

ಮಹಿಳೆಯರು ಅಪ್ಪಿತಪ್ಪಿಯೂ ಕೆಲವೊಂದು ಕೆಲಸಗಳಲ್ಲಿ ತೊಡಗಿಕೊಳ್ಳುವುದು ಇಲ್ಲ. ಪುರುಷರಿಗಾಗಿಯೇ ಇರುವ ಸೆಲೂನ್‌ಗಳಲ್ಲಿ ಕೆಲಸ ಮಾಡುವುದೇಂದರೆ ಮಹಿಳೆಯರಿಗೂ ಮುಜುಗರವಾಗುತ್ತವೆ. ಇಂತಹ ಸಂದರ್ಭದಲ್ಲಿ ತಾವು ಯುವತಿಯರು ಎಂದು ಹೇಳಿಕೊಳ್ಳದೇ ಸಲೂನ್‌ನಲ್ಲಿ ಕೆಲಸ ಗಿಟ್ಟಿಸಿದ ಅಪರೂಪದ ಘಟನೆಗೆ ಯುವತಿಯರಿಬ್ಬರು ಕಾರಣರಾಗಿದ್ದಾರೆ.

22-shaving

ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುವ ಜ್ಯೋತಿ ಕುಮಾರಿ ಮತ್ತು ಆಕೆಯ ಸಹೋದರಿ ನೇಹಾ ೨೦೧೪ರಲ್ಲಿ ಕೆಲಸ ಮಾಡತೊಡಗಿದರು. ಈ ವೇಳೆ ಅವರು ಹುಡುಗರ ವೇಷ ಧರಿಸಿ ಬಂದವರಿಗೆ ಕ್ಷೌರ ಸೇವೆ ಮಾಡಿದ್ದಾರೆ. ಈ ವೇಳೆ ಅವರ ತಂದೆ ಅನಾರೋಗ್ಯದಿಂದ ಕ್ಷೌರದ ಅಂಗಡಿಯನ್ನು ಮುಚ್ಚಬೇಕಾಗಿ ಬಂದಾಗ ಬದುಕು ಅತಂತ್ರವಾಯಿತು.

ಕುಟುಂಬಕ್ಕೆ ಬೇರೆ ಯಾವುದೇ ಆದಾಯ ಇಲ್ಲವಾದಾಗ ಹುಡುಗಿಯರು ಹುಡುಗರಂತೆ ವೇಷ ಧರಿಸಿ ತಲೆಗೂದಲನ್ನು ಹುಡುಗರಂತೆ ಕತ್ತರಿಸಿಕೊಂಡು ದೀಪಕ್ ಮತ್ತು ರಾಜು ಎಂದು ಹೆಸರನ್ನು ಇಟ್ಟುಕೊಂಡರು.

ಆದರೆ ಗ್ರಾಮದಲ್ಲೇ ಕ್ಷೌರ ಸೇವೆ ಮಾಡಿದರೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ವೇಷ ಬದಲಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಕ್ಷೌರ ಅಂಗಡಿಯಲ್ಲಿ ಕೆಲಸ ಮಾಡತೊಡಗಿದರು.

ಇದೇ ವೇಳೆ ಪುರುಷರಂತೆ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಧರಿಸತೊಡಗಿದರು. ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಯಿತು. ಆದರೆ ಅದೆಲ್ಲವನ್ನು ಗಣನೆಗೆ ತೆಗೆದುಕೊಳ್ಳದೆ ಸಹೋದರಿಯರು ತಮ್ಮ ಗುರುತು ಸಿಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡತೊಡಗಿದರು.

ಅಚ್ಚರಿ ಎಂದರೆ ದಿನಕ್ಕೆ ೪೦೦ ರೂಪಾಯಿಗಳ ಟಿಪ್ಸ್‌ನ್ನೇ ಗ್ರಾಹಕರಿಂದ ಪಡೆಯುತ್ತಿದ್ದರು. ಈ ಸಂಬಂಳ ಜೊತೆಗೆ ಟಿಪ್ಸ್ ಕೂಡ ಅನಾರೋಗ್ಯ ತಂದೆಯ ಔಷಧಿ ಹಾಗೂ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿತ್ತು.

ಈ ಮಧ್ಯೆ ಸಹೋದರಿಯರ ಪೈಕಿ ಜ್ಯೋತಿ ಬಿಡುವಿನ ವೇಳೆ ಕಾಲೇಜಿಗೆ ತೆರಳಿ ಪದವಿ ಪಡೆದಿದ್ದಾಳೆ. ನೇಹಾ ಕಾಲೇಜಿಗೆ ತೆರಳಿ ವ್ಯಾಸಂಗ ಮುಂದುವರಿಸಿದ್ದಾಳೆ. ಈಗ ಸಹೋದರಿಯರು ತಮ್ಮ ನಿಜವಾದ ಪರಿಚಯವನ್ನು ಗ್ರಾಹಕರಿಗೆ ತಿಳಿಸಿದ್ದಾರೆ. ಇದರಿಂದ ತಮಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ತಮ್ಮ ಕೆಲಸದ ಬಗ್ಗೆ ಗ್ರಾಹಕರು ಅಭಿಮಾನದಿಂದ ಮಾತನಾಡುತ್ತಾರೆ. ನಮಗೆ ಯಾವುದೇ ಭೀತಿ ಈಗಿಲ್ಲ ಎಂದು ಜ್ಯೋತಿ ಹೇಳುತ್ತಾರೆ.

ಅನಾರೋಗ್ಯ ಪೀಡಿತರಾದ ತಂದೆ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. ಅವರು ಕೆಲಸ ಮಾಡುವಾಗ ನನಗೆ ತುಂಬಾ ನೋವಾಗುತ್ತಿತ್ತು. ಈಗ ನನಗೆ ಅಭಿಮಾನ ಹುಟ್ಟಿಸುತ್ತದೆ ಎಂದು ತಂದೆ ಧೃವ ನಾರಾಯಣ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸಹೋದರಿಯಿಬ್ಬರ ಈ ಕಥೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕ್ಷೌರ ಅಂಗಡಿ ಮತ್ತಷ್ಟು ಜನಪ್ರಿಯವಾಗಿದೆ. ಬನ್ವಾರಿ ಟೋಲಾ ಗ್ರಾಮದಲ್ಲಿರುವ ಕ್ಷೌರದಂಗಡಿಯನ್ನು ಮುಂದುವರಿಸಿಕೊಂಡು ಹೋಗಲು ಸಹೋದರಿಯರು ನಿರ್ಧರಿಸಿದ್ದಾರೆ. ಸರ್ಕಾರವು ಅವರ ನೆರವಿಗೆ ಬರುವುದಾಗಿ ಪ್ರಕಟಿಸಿದೆ.

Leave a Comment