ಗುರುಗ್ರಹದ 10 ಉಪಗ್ರಹಗಳ ಪತ್ತೆ

ಖಗೋಳ ವಿಜ್ಞಾನಿಗಳ ತಂಡ ಇತ್ತೀಚೆಗೆ ಗುರುಗ್ರಹದ ೧೦ ಹೊಸ ಉಪಗ್ರಹಗಳ (ಚಂದ್ರರನ್ನು) ಪತ್ತೆ ಮಾಡಿದೆ. ಈ ಹೊಸ ೧೦ ಉಪಗ್ರಹಗಳು ಸೇರಿದರೆ, ಗುರುಗ್ರಹದ ಉಪಗ್ರಹಗಳ ಸಂಖ್ಯೆ ೭೯ಕ್ಕೇರಿದೆ. ಹೀಗಾಗಿ, ಸೌರಮಂಡಲದಲ್ಲಿರುವ ಯಾವುದೇ ಗ್ರಹ ಹೊಂದಿರದಷ್ಟು ಹೆಚ್ಚು ಉಪಗ್ರಹಗಳನ್ನು ಗುರುಗ್ರಹ ಹೊಂದಿದೆ. ಗುರುಗ್ರಹ ಮತ್ತು ಅದರ ೭೯ ಉಪಗ್ರಹಗಳು ಸೇರಿ ಸೌರಮಂಡಲದಲ್ಲಿ ಗುರುಗ್ರಹ ತನ್ನದೇ ಆದ ಮಿನಿ ಸೌರಮಂಡಲ ಹೊಂದಿರುವಂತಾಗಿದೆ.

ಇತ್ತೀಚೆಗೆ ಜಾಗತಿಕ ಖಗೋಳ ವಿಜ್ಞಾನಿಗಳ ತಂಡವೊಂದು ಗುರುಗ್ರಹದ 10 ಹೊಸ ಉಪಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಈ 10 ಉಪಗ್ರಹಗಳು ಸೇರಿದಂತೆ ಗುರುಗ್ರಹದ ಉಪಗ್ರಹಗಳ ಸಂಖ್ಯೆ 79ಕ್ಕೇರಿದೆ.
ಹೀಗಾಗಿ, ಸೌರಮಂಡಲದಲ್ಲಿಯ ಯಾವುದೇ ಗ್ರಹ ಹೊಂದಿರದಷ್ಟು ಉಪಗ್ರಹಗಳನ್ನು ಗುರುಗ್ರಹ ಹೊಂದಿದಂತಾಗಿದೆ.

‘ಗುರುಗ್ರಹದ ಸುತ್ತ ಸುತ್ತುತ್ತಿರುವ ೧೦ ಅದರ ಉಪಗ್ರಹಗಳನ್ನು ಪತ್ತೆ ಹಚ್ಚಿರುವುದಾಗಿ’ ಅಂತರರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡ ಹೇಳಿವೆ. ಇತ್ತೀಚೆಗೆ ಪತ್ತೆಯಾದ ೧೦ ಉಪಗ್ರಹಗಳು ಈವರೆಗೆ ಯಾಕೆ ಕಾಣಿಸಲಿಲ್ಲ. ಅವು ಎಲ್ಲಿ ಅವಿತುಕೊಂಡಿದ್ದವು ಎಂಬ ಕುತೂಹಲ ಮೂಡಿಸುತ್ತದೆಯಾದರೂ ಖಗೋಳ ವಿಜ್ಞಾನಿಗಳು ಹೇಳುವ ಪ್ರಕಾರ ಅವು ಅತೀ ಸಣ್ಣ ಗಾತ್ರವಾಗಿರುವುದರಿಂದ ಮಾಮೂಲಿ ದೂರದರ್ಶಕಗಳ ಕಣ್ಣಿಗೆ ಬಿದ್ದಿರಲಿಲ್ಲ ಎಂದಿದ್ದಾರೆ.

‘ಆ ಉಪಗ್ರಹಗಳನ್ನು ಅತ್ಯಂತ ಪ್ರಬಲ ಟೆಲಿಸ್ಕೋಪ್‌ಗಳಿಂದ ಪತ್ತೆ ಹಚ್ಚಲು ಕಷ್ಟವಾಗುವಷ್ಟು ಅವು ಸಣ್ಣ ಗಾತ್ರದವು’ ಎಂದು ಕಾರ್ನೇಜಿಯಾ ಇನ್‌ಸ್ಟಿಟ್ಯೂಟ್ ಫಾರ್ ಸೈನ್ಸ್‌ನ ಖಗೋಳ ಶಾಸ್ತ್ರಜ್ಞ ಸ್ಕಾಟ್ ಎಸ್ ಕ್ಷಪರ್ಡ್ ಹೇಳಿದ್ದಾರೆ ಇವರು ಶೋಧನಾ ತಂಡದ ಮುಖ್ಯಸ್ಥರು.

ಚಿಲಿ ದೇಶದಲ್ಲಿರುವ ಅತ್ಯಂತ ದೊಡ್ಡ ಟೆಲಿಸ್ಕೋಪ್ ಆದ ವಿಕ್ಟರ್ ಎಂ. ಬ್ಲಾಂಕೋಗೆ ೫೨೦ ಮೆಗಾಫಿಕ್ಸೆಲ್ ಕ್ಯಾಮರಾ ಅಳವಡಿಸಿ ಆ ಮೂಲದ ಈ ಹೊಸ ಉಪಗ್ರಹಗಳನ್ನು ಪತ್ತೆ ಮಾಡಲಾಗಿದೆ.

22vichara1

ಈಗ ಹೊಸದಾಗಿ ಪತ್ತೆಯಾಗಿರುವ ೧೦ ಉಪಗ್ರಹಗಳ ಪೈಕಿ ೯ಕ್ಕೆ ಇನ್ನು ಹೆಸರಿಕ್ಕಿಲ್ಲ. ಒಂದಕ್ಕೆ ಮಾತ್ರ ‘ವೆಲ್ ಟು ಡೊ’ ಎಂದು ಹೆಸರಿಡಲಾಗಿದೆ.

ರೋಮನ್ ಭಾಷೆಯಲ್ಲಿ ವೆಲ್ ಟು ಡೊ ಅಂದರೆ ಆರೋಗ್ಯ ಮತ್ತು ನೈರ್ಮಲ್ಯ. ಜ್ಯುಪಿಟರ್ ಗ್ರೀಸ್ ದೇವತೆ. ಹೀಗಾಗಿ, ವೆಲ್ ಟು ಡೊ ಜ್ಯುಪಿಟರ್‌ನ ಮೊಮ್ಮಗಳು ಎನ್ನಲಾಗಿದೆ.

ಗುರುಗ್ರದ ಸೌರಮಂಡಲದಲ್ಲಿಯೇ ಅತ್ಯಂತ ದೊಡ್ಡ ಗ್ರಹವಾಗಿರುವುದರಿಂದ ಇದರ ಗುರುತ್ವಾಕರ್ಷಣಾ ಶಕ್ತಿಯೂ ಹೆಚ್ಚು ಪ್ರಬಲವಾಗಿದೆ. ತನ್ನಿಂದ ೧೮.೬ ದಶಲಕ್ಷ ಮೈಲುಗಳವರೆಗಿನ ವಸ್ತುಗಳನ್ನು ಗುರುಗ್ರಹ ತನ್ನತ್ತ ಸೆಳೆಯಬಲ್ಲಂತ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿರುವುದರಿಂದ ಇದರ ಸುತ್ತ ಇನ್ನಷ್ಟು ಇದರ ಉಪಗ್ರಹಗಳು ಮುಂದೆ ಪತ್ತೆಯಾಗುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಡಲಾಗಿದೆ.

ಸೂರ್ಯನಿಂದ ೫ನೇ ಗ್ರಹವಾಗಿರುವ ಗುರುಗ್ರಹ, ಸೌರಮಂಡಲದ ಗ್ರಹಗಳಲ್ಲಿ ಅತೀ ದೊಡ್ಡ ಗ್ರಹ, ಇದರ ವ್ಯಾಸ ಭೂಮಿಯ ವ್ಯಾಸಕ್ಕಿಂತ ೧೧ ಪಟ್ಟು ಅಧಿಕ. ಭೂಮಿಯಿಂದ ಇದು ೬೨೯ ದಶಲಕ್ಷ ಕಿ.ಮೀ ದೂರದಲ್ಲಿದ್ದರೆ, ಸೂರ್ಯನಿಂದ ೭೭೮.೩ ದಶಲಕ್ಷ ಕಿ.ಮೀ ದೂರದಲ್ಲಿದೆ. ಹೀಗೆ ಸೂರ್ಯನಿಂದ ಅತೀ ದೂರದಲ್ಲಿರುವ ಕಾರಣ ಇದರ ಮೇಲ್ಮೈಮೇಲೆ ಸೂರ್ಯನ ಕಿರಣಗಳು ಬೀಳುವುದು ತೀರಾ ಕಷ್ಟ. ಹೀಗಾಗಿಯೇ ಈ ಗ್ರಹದ ಮೇಲ್ಮೇ ಉಷ್ಣತೆ ಮೈನಸ್ ೧೪೯ ಸೆಲ್ಸಿಯಸ್, ಇದರ ಹೊರ ಮೈ ದಪ್ಪದಾದ ಹಿಮ ಪದರದಿಂದ ಆವೃತ್ತವಾಗಿದ್ದು, ಅದರಲ್ಲಿ ತಂಪುಗೊಂಡ ಅಮೋನಿಯ ಮತ್ತು ಮಿಥೇನ್ ಹೆಪ್ಪುಗಟ್ಟಿವೆ.

ಉತ್ತನೂರು ವೆಂಕಟೇಶ್

Leave a Comment