ಗುರುಗಳ ಮನ ತಣಿಸಿದ ಶಿಷ್ಯರು

ಅಳ್ನಾವರ,ಸೆ8: ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕ ದಿನಚರಣೆ ಕಾರ್ಯಕ್ರಮದಲ್ಲಿ, ಸದಾ ಪಾಠದ ಬೋದನೆ ಮಾಡುತ್ತಾ ಮಕ್ಕಳನ್ನು ತಿದ್ದಿ ತಿಡುವ ಗುರುಗಳ ಸೇವೆಯನ್ನು ನೆನೆದ ಶಿಷ್ಯರು ಕುಣಿದು ಕುಪ್ಪಳಿಸಿ ಅವರ ಮನ ತಣಿಸಿದರು.
ನೃತ್ಯ, ನಾಟಕ, ಹಾಡು, ಶುಭಾಶಯ ಗೀತೆ ಪ್ರದರ್ಶನ ಮೂಲಕ ಶಿಕ್ಷಕರ ಮನ ರಂಜಿಸಿದರು. ‘ಸ್ಕೂಲ ಚಲೆ ಹಮ್’ ಹಾಡಿಗೆ ನೃತ್ಯ ಸೊಗಸಾಗಿ ಮೂಡಿ ಬಂತು. ಪ್ರಜ್ವಲ್ ಅನಸ್ಕರ, ಸಾಗರ ಕುಬೋಜಿ ಭಾಷಣ ಮಾಡಿ ಶಿಕ್ಷಕರ ಪಾತ್ರವನ್ನು ಕೊಂಡಾಡಿದರು.
ಮುಖ್ಯ ಅಥಿತಿ ಶಾಲಾ ಸಂಚಾಲಕ ಫಾದರ್ ಅಂಥೋನಿ ಡಿಸೋಜಾ ಮಾತನಾಡಿ, ‘ಗುರು ಅಂದರೆ ವ್ಯಕ್ತಿ ಅಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದದಡೆಗೆ ಕರೆದುಕೊಂಡು ಹೋಗುವ ಮಾರ್ಗದರ್ಶಕ ಗುರು’ ಎಂದು ಶಿಕ್ಷಕರ ಪಾತ್ರವನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಸೆರಾಪೀನ್ ಡಿಸೋಜಾ ಅವರ ಹುಟ್ಟು ಹಬ್ಬ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಸಿಸ್ಟರ್ ಯುಜ್ವೀನ್ ಸೈಮನ್, ಜುಲಿಯಾನಾ ಲೋಭೊ, ಪೀಲೋಮಿನಾ ಬೆರೆಟ್ಟೊ, ಲೂಸಿ ಕೊರಿಯಾ, ಶಾಲೆಟ ಬರಬೋಜಾ, ಮುಕ್ತಾ ಕಾತರಕಿ, ಉಮೇಶ ದೊಡ್ಡಮನಿ, ಲೀನಾ ಡಿಸೋಜಾ, ರುದ್ರೇಶ ಹಡಪದ, ಶಿವಲೀಲಾ ಶಿಂದೆ ಇದ್ದರು.
7 ನೇ ವರ್ಗದ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುಂಡಲಿಕ ಪಾರದಿ ಸ್ವಾಗತಿಸಿದರು. ಪರಿನಾ ಹಂದೂರ ಮತ್ತು ದಿವ್ಯಾ ಪಾಟೀಲ ನಿರೂಪಿಸಿದರು.  ಪ್ಲೇವಿಯಾ ಕಾಂತಿ ವಂದಿಸಿದರು.ಗುರು ಕಾಣಿಕೆ ಅರ್ಪಣೆ ನಡೆಯಿತು.

Leave a Comment