ಗುರುಗಳನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ

ಮೈಸೂರು. ಜೂ. 14. ತಮಗೆ ವಿದ್ಯೆಯನ್ನು ಹೇಳಿಕೊಡುವ ಗುರುಗಳನ್ನು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ದೇವರಾಜ ಮೊಹೊಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ, ಮೈಸೂರು ಇವುಗಳ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‍ಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕೆಲವು ದಶಕಗಳ ಹಿಂದೆ ಶಾಲೆಗಳಲ್ಲಿ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳು ಭಯ ಹೊಂದುತ್ತಿದ್ದರು. ಗುರುಗಳ ಆಜ್ಞಾನು ಸಾರ ನಡೆದು ಕೊಳ್ಳುತ್ತಿದ್ದರು. ಹಾಗಾಗಿ ಅವರಿಬ್ಬರ (ವಿದ್ಯಾರ್ಥಿ ಮತ್ತು ಶಿಕ್ಷಕ) ನಡುವೆ ಉತ್ತಮ ಭಾಂಧವ್ಯ ಇತ್ತು. ಕಾಲಕ್ರಮೇಣ ಅಂದಿನ ಸನ್ನಿವೇಶ ಬದಲಾಗಿದ್ದು ಇಂದು ವಿದ್ಯಾರ್ಥಿಗಳನ್ನು ಕಂಡರೆ ಶಿಕ್ಷಕರೇ ಭಯ ಪಡುವ ಪರಿಸ್ಧಿತಿ ನಿರ್ಮಾಣಗೊಂಡಿರುವುದು ಆತಂಕಕಾರಿ ಸಂಗತಿ ಎಂದರು.
ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಗುರುಗಳು ನೀಡುತ್ತಿದ್ದ ಮನೆಕೆಲಸ (ಹೋಂವರ್ಕ್)ಗಳನ್ನು ಸ್ವತಃ ವಿದ್ಯಾರ್ಥಿಗಳೇ ಜವಾಬ್ದಾರಿಯುತವಾಗಿ ಮಾಡುತ್ತಿದ್ದರು. ಇಂದು ವಿದ್ಯಾರ್ಥಿಗಳಿಗೆ ನೀಡಲಾಗುವ ಹೋಂ ವರ್ಕ್‍ಗಳನ್ನು ಮನೆಯ ಹಿರಿಯರೇ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಪಡಿಮೆಯಾಗಲು ಪ್ರಮುಖ ಕಾರಣ. ಹಾಗಾಗಿ ಮನೆಯ ಹಿರಿಯರು ತಮ್ಮ ಮಕ್ಕಳಿಂದಲೇ ಹೋಂ ವರ್ಕ್‍ಗಳನ್ನು ಮಾಡಿಸಲು ಮುಂದಾಗಬೇಕು. ಹೀಗಾದಾಗ ಮಾತ್ರ ಮಕ್ಕಳಲ್ಲಿ ಜ್ಞಾನಾರ್ಜನೆ ಹೆಚ್ಚಾಗಿ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದ ರಾಜುರವರು ವಿದ್ಯಾರ್ಧಿಗಳು ತಮಗೆ ವಿದ್ಯಾರ್ಜನೆ ನೀಡುವ ಗುರುಗಳನ್ನು ಗೌರವಿದಿಂದ ಕಾಣುವಂತೆ ಹಿತವಚನ ನೀಡಿ, ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ನುಡಿಯನ್ನು ನೆನಪು ಮಾಡಿಕೊಟ್ಟರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಕಾವೇರಿ ಬಳಗದ ಅಧ್ಯಕ್ಷೆ ಕಾವೇರಿಯಮ್ಮ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್‍ಗಳನ್ನು ವಿತರಿಸಿ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಜೀವ ವಿಮಾ ಅಧಿಕಾರಿ ವೆಂಕಟೇಶಯ್ಯ ಶಾಲೆಯ ಮುಖ್ಯ ಶಿಕ್ಷಕ ಮಹದೇವು, ಶಿಕ್ಷಕಿ ಸವಿತಾ, ಶಿಕ್ಷಣ ತಜ್ಞ ಸೀತಾರಾಮ್ ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment