ಗುರುಕುಲ ಸಂಸ್ಥೆ :ಉಚಿತ ಕೌಶಲ್ಯ ತರಬೇತಿ

ರಾಯಚೂರು.ನ.09- ಗ್ರಾಮೀಣ ಪ್ರದೇಶದ ಬಡ ನಿರುದ್ಯೋಗಿ ಯುವಕ,ಯುವತಿಯರಿಗೆ ಬೆಂಗಳೂರಿನ ಗುರುಕುಲ ಕೇಂದ್ರದಲ್ಲಿ 3 ತಿಂಗಳ ಉಚಿತ ಕೌಶಲ್ಯ ತರಬೇತಿ ನೀಡುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕೆಂದು ನಡ್ಜ್ ಲೈಫ್‌ಸ್ಕಿಲ್ ಫೌಂಡೇಷನ್ ರಾಜ್ಯ ಮುಖ್ಯಸ್ಥ ವಿನಾಯಕ್ ಅರಸ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಸಂಸ್ಥೆಯು ಕಳೆದ 4 ವರ್ಷಗಳಿಂದ ಬಡತನ ನಿರ್ಮೂಲನೆಗಾಗಿ ಯುವಕ,ಯುವತಿಯರಿಗೆ ಜೀವನದ ಕೌಶಲ್ಯ ಮತ್ತು ಉದ್ಯೋಗ ಕೌಶಲ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಗುರುಕುಲವನ್ನು ಸ್ಥಾಪಿಸಲಾಗಿದೆ, ಉದ್ಯೋಗ ಸೃಷ್ಟಿಯ ಪ್ರಯೋಗ ಶಾಲೆಯಾಗಿದೆ. ಸಂಸ್ಥೆಯನ್ನು 2015 ರಂದು ಅತುಲ್ ಸತಿಜಾ ಸ್ಥಾಪಿಸಿದರು.
ಇದುವರೆಗೂ ಸಂಸ್ಥೆಯು 5 ಸಾವಿರ ಜನರಿಗೆ ತರಬೇತಿ ನೀಡಿ ಉದೋಗ್ಯ ಕಲ್ಪಿಸಲಾಗಿದೆಂದು ತಿಳಿಸಿದರು.
ನೋಂದಣಿ ಶುಲ್ಕ 500 ರೂ. ಮಾತ್ರ ಸಂಸ್ಥೆಯು 3 ತಿಂಗಳ ಉಚಿತ ವಸತಿ, ಊಟ ಅಗತ್ಯವಿರುವ ಪರಿಕರಿಗಳೊಂದಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಲಾಗುತ್ತದೆ. ಬಡ ಕುಟುಂಬಗಳ ಯುವ ಸಮೂಹಕ್ಕೆ ಸಂಜೀವಿನಿಯಾಗಿದೆ. ಉದ್ಯೋಗವಿಲ್ಲದ 18 ರಿಂದ 26 ವರ್ಷದೊಳಗಿನ ಯುವಕ, ಯುವತಿಯರಿಗೆ ಮೊದಲ ಆದ್ಯತೆ ನೀಡುತ್ತದೆ. ವ್ಯಕ್ತಿತ್ವ ವಿಕಸನ, ಕುಟುಂಬ ನಿರ್ವಹಣೆ, ಆರ್ಥಿಕ ಹಾಗೂ ಆರೋಗ್ಯ ನಿರ್ವಹಣೆ ಕೌಶಲ್ಯ ಸಾಮಾಜಿಕವಾಗಿ ಅಭಿವೃದ್ಧಿಗೊಳ್ಳುವುದನ್ನು ಕಲ್ಪಿಸಲಾಗುತ್ತದೆಂದರು.
ಡಿಜಿಟಲ್ ಸಾಕ್ಷರತೆ, ಇಂಗ್ಲೀಷ್ ಸಂಭಾಷಣೆ, ಸಂವಹನ, ಸಾಮಾರ್ಥ್ಯದ ಜೊತೆಗೆ ಉದ್ಯೋಗಕ್ಕಾಗಿ ಬಿಪಿಒ, ಎಲೆಕ್ಟ್ರಿಷೀಯನ್ ಸೇರಿದಂತೆ ಯುವತಿಯರಿಗೆ ಬ್ಯೂಟಿಷಯನ್ ತರಬೇತಿ ನೀಡಲಾಗುತ್ತದೆಂದು ತಿಳಿಸಿದರು.
ಈ ಸಂಜರ್ಭದಲ್ಲಿ ಅಂಬಣ್ಣ, ಪವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment