ಗುರಿ ತಪ್ಪಿದ ಭರ್ಜಿ: ವಿದ್ಯಾರ್ಥಿ ಸಾವು

ಬ್ಯಾಡಗಿ ಜು 11 – ತಾಲೂಕಿನ  ಕೆರೂಡಿ ಗ್ರಾಮದ ಸರಕಾರಿ ಪ್ರೌಢ  ಶಾಲೆಯಲ್ಲಿ  ನಿನ್ನೆ ಜಾವಲಿನ್ ಥ್ರೋ ಅಭ್ಯಾಸದಲ್ಲಿ ವಿದ್ಯಾರ್ಥಿಯೋರ್ವ ಎಸೆದ ಭರ್ಜಿ ಗುರಿ ತಪ್ಪಿ  ವಿದ್ಯಾರ್ಥಿಯೋರ್ವ ಗಂಟಲಿಗೆ ತಗುಲಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಜರುಗಿದೆ.
ಮೃತ ವಿದ್ಯಾರ್ಥಿ ಹತ್ತನೇ ತರಗತಿ ಓದುತ್ತಿದ್ದ ಮಲ್ಲಿಕ್ ರೆಹಮಾನ್ ನೆಹರಾಂಬೇರ (15) ಎಂದು ತಿಳಿದು ಬಂದಿದೆ.
ಭರ್ಜಿ ತಿವಿದು ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಬ್ಯಾಡಗಿ ಆಸ್ಪತ್ರೆಗೆ ದಾಖಲಿಸಿ,  ತದ ನಂತರ ಜಿಲ್ಲಾಸ್ಪತ್ರೆಗೆ ಚಿಕಿತ್ಸಗೆ ಕರೆದೊಯ್ಯಲಾಗಿತ್ತು, ಅಲ್ಲಿಯೂ ಆತ ಚಿಕಿತ್ಸೆ ಫಲಿಸದೇ  ಇಂದು ಬೆಳಗಿನ  ಜಾವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮುಂದಿನ ತಿಂಗಳು ನಡೆಯಬೇಕಿದ್ದ ಶಾಲಾ ಕ್ರೀಡಾಕೂಟ ತಯಾರಿ ಹಿನ್ನಲೆಯಲ್ಲಿ ಪೂರ್ವ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ  ಈ ಅವಘಡ ಸಂಭವಿಸಿದೆ  ಎಂದು ತಿಳಿದು ಬಂದಿದೆ
ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು  ಪಾಲಕರು  ಆಗ್ರಹಿಸಿದ್ದು ಕಾಗೀನೆಲೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment