ಗುಣಶೀಲ ಆಸ್ಪತ್ರೆ ರೋಗಮುಕ್ತ ಮಗು ಜನನ

ಬೆಂಗಳೂರು, ಅ ೧೬- ವಂಶವಾಹಿನಿಯಲ್ಲಿ ದೋಷ ಹೊಂದಿದ್ದ ಮೈಸೂರಿನ ದಂಪತಿಗೆ ಆರೋಗ್ಯವಂತ ಮಗು ಜನಿಸುವಂತೆ ಮಾಡುವ ಮೂಲಕ ನಗರದ ಗುಣಶೀಲ ಸರ್ಜಿಕಲ್ ಮತ್ತು ಮ್ಯಾಟರ್ನಿಟಿ ಆಸ್ಪತ್ರೆಯು ಇನ್ನೊಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಸಿಕಲ್ ಸೆಲ್ ರೋಗ ಹೊಂದಿದ್ದ ಈ ದಂಪತಿಯ ಎಚ್‌ಬಿಬಿ ವಂಶವಾಹಿನಿಯನ್ನು ತಿದ್ದದೆಯೇ ಇವರ ಹೆಣ್ಣುಮಗುವಿಗೆ ಈ ರೋಗ ವರ್ಗಾವಣೆಯಾಗದಂತೆ ನೋಡಿಕೊಳ್ಳುವ ಮೂಲಕ ವೈದ್ಯರು ವಿಶೇಷ ಸಾಧನೆ ಮೆರೆದಿದ್ದಾರೆ.
ಡಾ. ವಾಣಿಶ್ರೀ ಅವರು ಮಹಾರಾಷ್ಟ್ರ ಮೂಲದ ಅಲೋಕ್ ಕಾಳೆಯವರನ್ನು ವಿವಾಹವಾಗಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಇಬ್ಬರೂ ತಮ್ಮ ವಂಶವಾಹಿನಿಯಲ್ಲಿ ಸಿಕಲ್ ಸೆಲ್ ವಂಶವಾಹಿನಿಯ ಸಮಸ್ಯೆ ಹೊಂದಿರುವುದರಿಂದ ಅವರಿಗೆ ಮಗು ಪಡೆಯುವುದು ಆತಂಕದ ಸಂಗತಿಯಾಗಿ ಪರಿಣಮಿಸಿತ್ತು. ಮದುವೆಯಾಗಿ ನಾಲ್ಕು ವರ್ಷವಾದರೂ ಮಗು ಪಡೆಯುವ ಅವರ ಪ್ರಯತ್ನ ಫಲ ನೀಡಿರಲಿಲ್ಲ. ಜೊತೆಗೆ, ಒಂದು ವೇಳೆ ಗರ್ಭಧಾರಣೆಯಾದರೂ ತಮ್ಮ ಮಗು ಕೂಡ ಸಿಕಲ್ ಸೆಲ್ ರೋಗದೊಂದಿಗೆ ಜನಿಸುತ್ತದೆ ಎಂದು ಅವರು ಆತಂಕಗೊಂಡಿದ್ದರು.ಗುಣಶೀಲ ಆಸ್ಪತ್ರೆಯಲ್ಲಿ ಐವಿಎಫ್ (ಪ್ರಣಾಳ ಶಿಶು) ಚಿಕಿತ್ಸೆ ಪಡೆದುಕೊಂಡಿತು. ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಂತಾನ ಸಾಫಲ್ಯ ತಜ್ಞೆ ಡಾ. ದೇವಿಕಾ ಗುಣಶೀಲ ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಡಯಾಗ್ನೋಸಿಸ್ (ಪಿಜಿಡಿ) ಕೂಡ ಅಂತಹುದೇ ಮತ್ತೊಂದು ಹೊಸ ತಂತ್ರಜ್ಞಾನವಾಗಿದ್ದು, ಈ ಚಿಕಿತ್ಸೆ ಪಡೆಯುವ ಮೂಲಕ ವಂಶವಾಹಿನಿಯ ಸಮಸ್ಯೆ ಹೊಂದಿರುವ ದಂಪತಿಗಳು ಕೂಡ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯವಿದೆ” ಎಂದು ತಿಳಿಸಿದರು. ಡಾ. ರಾಜಶೇಖರ್ ನಾಯಕ್, ಡಾ. ಜಯರಾಮ್ ಎಸ್ ಮತ್ತಿತರರ ವೈದ್ಯರು ತಂಡದಲ್ಲಿದ್ದರು.

Leave a Comment