ಗುಣಮಟ್ಟದ ಶಿಕ್ಷಣ ಆದ್ಯತೆ ನೀಡಿ

ಪಾವಗಡ, ಜ. ೧೧- ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸ್ಪರ್ಧೆ ನೀಡಬೇಕಾಗಿರುವುದರಿಂದ ಶಾಲಾ ಶಿಕ್ಷಕರು ಗ್ರಾಮಸ್ಥರ ಸಹಕಾರ ಹಾಗೂ ಎಸ್.ಡಿ.ಎಂ.ಸಿ ಕಮಿಟಿಯ ಸಹಯೋಗದೊಂದಿಗೆ ಶಾಲೆಗಳನ್ನು ಅಭಿವೃದ್ಧಿ ಪಡಿಸುವತ್ತಾ ಗಮನಹರಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಹನುಮಂತರಾಯಪ್ಪ ತಿಳಿಸಿದರು.

ತಾಲ್ಲೂಕಿನ ಬುಡ್ಡಾರೆ‌ಡ್ಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ನೀಲಮ್ಮನಹಳ್ಳಿ ಕ್ಲಸ್ಟರ್ ಮಟ್ಟದ ಎಸ್.ಡಿ.ಎಂ.ಸಿ ಸದಸ್ಯರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವಲ್ಲಿ ಸರ್ಕಾರದೊಂದಿಗೆ ಸ್ಪಂದಿಸಬೇಕಾಗಿದೆ. ಎಸ್‌ಡಿಎಮ್‌ಸಿ ಸದಸ್ಯರ ಆಸಕ್ತಿ ಮತ್ತು ಕ್ರಿಯಾತ್ಮಕ ಸಲಹೆ, ಸೂಚನೆ ಹಾಗೂ ಸಹಾಯದ ಅಗತ್ಯತೆ ಇದೆ ಎಂದರು.

ಕಾರ್ಯಾಗಾರದಲ್ಲಿ ಸಿಆರ್‌ಪಿ ಕೃಷ್ಣಕಾಂತ್, ಶಾಲಾ ಮುಖೋಪಾಧ್ಯಾಯ ರಾಮಾಂಜಿನೇಯ, ಸೀನಪ್ಪ, ಪ್ರಕಾಶ್ ನಾಯ್ಕ್, ಶಿಕ್ಷಕರಾದ ಚಂದ್ರಶೇಖರ್ ರೆಡ್ಡಿ , ಎಸ್‍ಡಿಎಮ್‍ಸಿ ಅಧ್ಯಕ್ಷರಾದ ಕೆ. ರಾಂಪುರ ಎ. ಗೋಪಿ, ಹನುಮಂತರಾಯಪ್ಪ, ಕ್ಲಷ್ಟರ್ ಶಾಲೆಗಳ ಶಿಕ್ಷಕರು, ಎಸ್‍ಡಿಎಮ್‍ಸಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Comment