ಗುಡ್ ಬೈ

ಕನ್ನಡ ಸಿನಿಮಾ ರಂಗದ ಹಿರಿಯ ಸಾಹಸ ಕಲಾವಿದ ಕೌರವ ವೆಂಕಟೇಶ್ ೧೧೨೫ ಸಿನಿಮಾಗಳಿಗೆ ತಮ್ಮ ಕೌಶಲ್ಯವನ್ನು ನೀಡಿದವರು. ಈಗ ಅವರ ನಿರ್ಮಾಣದಲ್ಲಿ ಅವರ ಪುತ್ರ ವಿ ರವಿಚಂದ್ರನ್ ಕಥೆ ಬರೆದು, ಚಿತ್ರಕಥೆ ಸಿದ್ದಮಾಡಿ, ನಿರ್ದೇಶನ ಜೊತೆಗೆ ನಾಯಕನಾಗಿರುವ ಗುಡ್‌ಬೈ ಚಿತ್ರವು ಈ ವಾರ ಬಿಡುಗಡೆಗೊಂಡಿದೆ.

ಮರ್ಡರ್ ಮಿಸ್ಟರಿಯನ್ನೊಳಗೊಂಡ ಯುವಕರ ಸುತ್ತ ಹಣೆಯಲಾದ ಕತೆಯಾಗಿದೆ ಪ್ರೀತಿ ಪ್ರೇಮ ಒಳಗೊಂಡ ಗುಡ್‌ಬೈ ಚಿತ್ರವನ್ನು ಸಕಲೇಶಪುರ ಬೆಂಗಳೂರಿನ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ ಎನ್ನುತ್ತಾರೆ  ರವಿಚಂದ್ರನ್. ವಿ ರವಿಚಂದ್ರನ್, ಜೈ ಪ್ರಕಾಶ್, ಮೋನಿಷ ಥಾಮಸ್, ಪದ್ಮಾವಾಸಂತಿ, ಶೋಭರಾಜ್, ವಿಕ್ಟರಿ ವಾಸು, ಬಿರಾದಾರ್, ಸುಬ್ರಮಣಿ, ಭಾರತಿ, ಪರಮೇಶ್, ಗೂಳಿಗಟ್ಟಿ ಮಹೇಶ್, ವಿನ್ಸೆಂಟ್ ಬ್ರಾಂಡ್, ವಿನ್ಸೆಂಟ್ ಪಾಪು, ಶಿವಾರೆಡ್ಡಿ, ಸಿದ್ದು ಪರ್ಸನೂರ್ ತಾರಾಗಣದಲ್ಲಿ ಇದ್ದಾರೆ.

ತಾಂತ್ರಿಕ ವರ್ಗದಲ್ಲಿ ವೆಸ್ಲಿಬ್ರೌನ್ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಆರು ಸಾಹಸ ದೃಶ್ಯಗಳು, ಸಂಜೀವ್ ರೆಡ್ಡಿ ಸಂಕಲನ, ಯುಗತ್ ಸಂಗೀತ, ಕಾರ್ತಿಕ್ ಕಾಳಿಮುತ್ತು ಗೀತ ಸಾಹಿತ್ಯ, ಬಾಬು ಖಾನ್ ಕಲಾ ನಿರ್ದೇಶನ ಒದಗಿಸಿದ್ದಾರೆ.

Leave a Comment