ಗುಡ್ಡ ಕುಸಿದು ಮನೆ ಧ್ವಂಸ: 3 ಸಾವು

ಬುದ್ಧ ಕೇದಾರ (ಉತ್ತರಕಾಂಡ), ಆ. ೨೯: ಗುಡ್ಡ ಕುಸಿತ ಪ್ರಕರಣದಲ್ಲಿ ಮನೆಯೊಂದು ಧ್ವಂಸವಾಗಿದ್ದು ಕನಿಷ್ಟ ಮೂವರು ಮೃತರಾದ ದುರಂತ ಉತ್ತರಕಾಂಡದ ಬುದ್ಧ ಕೇದಾರ ಪ್ರದೇಶದಲ್ಲಿನ ಕೋಟ್ ಎಂಬ ಗ್ರಾಮದಲ್ಲಿ ಸಂಭವಿಸಿದೆ. ಉಳಿದ ೮ ಮಂದಿ ಮನೆಯ ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ದಳ ಮತ್ತು ಜಿಲ್ಲಾಡಳಿತದ ತಂಡಗಳಿಂದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈವರೆಗೆ ಮೂವರ ಮೃತದೇಹಗಳು ಮಾತ್ರ ಸಿಕ್ಕಿವೆ ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಲಾಗಿದೆ.

Leave a Comment