ಗುಡ್ಡ ಕುಸಿದು ಅಂಕೋಲಾ ಹೆದ್ದಾರಿ ಬಂದ್

ಅಂಕೋಲಾ,ಜು11-:- ಮಳೆಯಿಂದ ಗುಡ್ಡ ಕುಸಿದು ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಯೆ ಮೇಲೆ ಬಿದ್ದು ಚಾಲಕನಿಗೆ ಘಾಯವಾದ  ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿಯಲ್ಲಿ  ನಡೆದಿದೆ.
ಗುಡ್ಡದ ಪಕ್ಕದಲ್ಲಿ ಲಾರಿ ನಿಲ್ಲಿಸಿದ್ದರಿಂದ ಕುಸಿತದ ವೇಳೆ ಲಾರಿ ಮೇಲೆ ಬಿದ್ದ ಮಣ್ಣಿನಲ್ಲಿ ಹುಗಿದು ಹೋಗಿದೆ.
ಈ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕನಿಗೆ  ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗುಡ್ಡ ಕುಸಿತ ಹಿನ್ನಲೆಯಲ್ಲಿ ಹುಬ್ಬಳ್ಳಿ -ಯಲ್ಲಾಪುರ ಅಂಕೋಲಾ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ರಸ್ತೆ ಸಂಚಾರಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Leave a Comment