ಗುಜರಾತ್‌: ಅವಳಿ ಶಿಶುವಿಗೂ ಕೊರೋನಾ!

ಗುಜರಾತ್, ಮೇ ೨೩ ಮೆಹ್ಸಾನಾ ಜಿಲ್ಲೆಯಲ್ಲಿ 6 ದಿನಗಳ ಹಿಂದಷ್ಟೇ ಜನಿಸಿದ್ದ ನವಜಾತ ಅವಳಿ ಶಿಶುಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಗುಜರಾತ್ನಲ್ಲಿ ನವಜಾತ ಶಿಶುಗಳಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ. ಮೊಲಿಪುರ ಗ್ರಾಮದ ಮಹಿಳೆಯೊಬ್ಬರು ವಡ್ನಗರ ಸಿವಿಲ್ ಆಸ್ಪತ್ರೆಯಲ್ಲಿ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಮೇ16ರಂದು ಜನನ ನೀಡಿದ್ದರು. ವೇಳೆ ತಾಯಿಯಲ್ಲಿ ಕೋವಿಡ್ ಇರುವುದು ಪತ್ತೆಯಾಗಿತ್ತು, ಅವಳಿಗಳನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಇರುವುದು ದೃಢಪಟ್ಟಿತ್ತು. ಸದ್ಯ ಅವಳಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮನೋಜ್ ದಕ್ಷಿಣಿ ತಿಳಿಸಿದ್ದಾರೆ. ಮೊಲಿಪುರ ಗ್ರಾಮದಲ್ಲಿ ಮುಂಬೈನಿಂದ ಬಂದಿರುವ ಹೆಚ್ಚಿನ ಜನರಿದ್ದಾರೆ, ಇವರಿಂದಾಗಿ ಹೆಚ್ಚಿನ ಕೋವಿಡ್ ಪ್ರಕರಣಗಳು ಗ್ರಾಮದಲ್ಲಿ ಕಂಡು ಬಂದಿದೆ ಎಂದು ಮನೋಜ್ ವಿವರಿಸಿದರು.

Leave a Comment