ಗುಂಡೇಟು ಬಿದ್ದಿದ್ದ ಮಾಜಿ ಬಾಕ್ಸರ್ ಶವ ಪತ್ತೆ

ಗ್ರೇಟರ್ ನೊಯ್ಡಾ, ಜ.೧೩- ಉಜ್ಬೆಕಿಸ್ತಾನ್, ಫ್ರಾನ್ಸ್ ಮತ್ತು ರಷ್ಯಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಭಾರತದ ಮಾಜಿ ಬಾಕ್ಸರ್ ಜಿತೇಂದ್ರ ಮನ್ (27) ಎಂಬ ಯುವಕನ ಗುಂಡುಗಳಿಂದ ಘಾಸಿಗೊಂಡಿದ್ದ ಮೃತದೇಹ ಗ್ರೇಟರ್ ನೊಯ್ಡಾದ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಯಾಗಿದೆ.

ಇಲ್ಲಿನ ಆಲ್ಫಾ ಸೆಕ್ಟರ್‌ನ ವ್ಯಾಯಾಮ ಶಾಲೆಯೊಂದರಲ್ಲಿ ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದ ಜಿತೇಂದ್ರ ಮೃತದೇಹ, ಅವರ ಫ್ಲ್ಯಾಟ್‌ನ ಮಾಜಿ ಜತೆಗಾರ್ತಿ ಪ್ರೀತಮ್ ಟೋಕಾಸ್ ಎಂಬಾಕೆಗೆ ಮೊದಲು ಕಂಡಿದೆ.

ಜನವರಿ 10 ರಂದು ಜಿತೇಂದ್ರ ಎಂದಿನಂತೆ ಜೀಮ್‌ಗೆ ಹೋದರೂ, ಆಗಿನಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಗ್ರಾಮಾಂತರ ಎಸ್ಪಿ ಸುನೀತಿ ಸಿಂಗ್ ಹೇಳಿದ್ದಾರೆ.

ಪ್ರೀತಮ್ ಅವರ ಬಳಿ ಜೀತೇಂದ್ರ ಅವರ ಅಪಾರ್ಟ್‌ಮೆಂಟ್‌ನ ಇನ್ನೊಂದು ಬೀಗದ ಕೈ ಇದ್ದ ಕಾರಣ ಅಲ್ಲಿಗೆ ತೆರಳಿ ಬಾಗಿಲು ತೆರೆದಾಗ ಜಿತೇಂದ್ರ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರೂ, ಪ್ರೀತಮ್ ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದಾರೆ.

Leave a Comment