ಗುಂಡಿನ ಚಕಮಕಿ ಯೋಧ ಹುತಾತ್ಮ

ಶ್ರೀನಗರ, ಫೆ. ೧೨- ಭದ್ರತಾಪಡೆ ಮತ್ತು ಉಗ್ರರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಹಾಗೆಯೇ ಒಬ್ಬ ಯೋಧನೂ ಹುತಾತ್ಮನಾಗಿದ್ದಾನೆ. ಇಂದು ಬೆಳಿಗ್ಗೆ ದಕ್ಷಿಣ ಕಾಶ್ಮೀರದ ಪುಲ್ವಾಮ ವಲಯದ ರತ್ನಿಪೋರ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ಪ್ರಾರಂಭವಾಗಿದೆ.
ಈ ಭಾಗಕ್ಕೆ ಉಗ್ರರು ನುಸುಳಿದ್ದಾರೆ, ಬೇಹುಗಾರಿಕೆ ಮೂಲಗಳ ಮಾಹಿತಿಯನ್ನು ಅನುಸರಿಸಿ ಇಡೀ ಪ್ರದೇಶವನ್ನು ಸುತ್ತುವರೆದ ಭದ್ರತಾಪಡೆಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ, ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಪ್ರತಿಯಾಗಿ ಭದ್ರತಾಪಡೆಗಳು ಗುಂಡಿನ ದಾಳಿಯನ್ನು ನಡೆಸುವ ಮೂಲಕ ಭಾರೀ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ಇದರಲ್ಲಿ ಒಬ್ಬ ಯೋಧನು ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಭದ್ರತಾ ಮೂಲಗಳು ಹೇಳಿವೆ.

Leave a Comment